ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹಕ್ಕೆ ಮುಹೂರ್ತ ಸಿದ್ಧ: ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧ

Last Updated 31 ಅಕ್ಟೋಬರ್ 2019, 7:51 IST
ಅಕ್ಷರ ಗಾತ್ರ

ಬೆಂಗಳೂರು: ಮುಜರಾಯಿ ಇಲಾಖೆಯ ವತಿಯಿಂದ ಈಗಾಗಲೇ ಪ್ರಸ್ತಾಪಿಸಲಾಗಿರುವ ಸಾಮೂಹಿಕ ವಿವಾಹದ ಮುಹೂರ್ತ ನಿಗದಿಯಾಗಿದ್ದು, ಮುಂಬರುವ ಏಪ್ರಿಲ್ 26 ಮತ್ತು ಮೇ 24ರಂದು ರಾಜ್ಯದ 90 ರಿಂದ 100 ಎ ದರ್ಜೆ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ವಿಧಾನಸೌಧದಲ್ಲಿ ಈ ವಿಷಯ ಪ್ರಕಟಿಸಿದರು.

ವಧುವಿನ ತಾಳಿಗಾಗಿ₹40 ಸಾವಿರ, ಧಾರೆ ಸೀರೆ ಖರೀದಿಸಲು ₹10 ಸಾವಿರ ಹಾಗೂ ವರನಿಗೆ ಪಂಚೆ, ಧೋತಿ ಖರೀದಿಗೆ ₹5 ಸಾವಿರ ನೀಡಲಾಗುವುದು. ಆಯಾ ಜಿಲ್ಲಾಧಿಕಾರಿಗಳು ಒಂದು ತಿಂಗಳ ಮೊದಲಾಗಿ ವರ ಮತ್ತು ವಧುವಿನ ಖಾತೆಗಳಿಗೆ ಈ ಮೊತ್ತ ಜಮಾ ಮಾಡಲಿದ್ದಾರೆ ಎಂದರು.

ಈ ವರ್ಷ 1 ಸಾವಿರ ವಿವಾಹ ನಡೆಯುವ ನಿರೀಕ್ಷೆ ಇದೆ.ಮುಜರಾಯಿ ದೇವಾಲಯಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲಾಗಿದೆ ಎಂದರು.

ಯಕ್ಷಗಾನ ಕಲಾವಿದರ ಗೌರವಧನ ಹೆಚ್ಚಳ ಪರಿಶೀಲನೆಗೆ ಸಮಿತಿ:ಮುಜರಾಯಿ ಇಲಾಖೆಯ ದೇವಾಲಯಗಳ ವತಿಯಿಂದ ನಡೆಯುತ್ತಿರುವ ಯಕ್ಷಗಾನ ಮೇಳಗಳ ಕಲಾವಿದರಿಗೆ ಗೌರವ ಸಂಭಾವನೆ ಕಡಿಮೆ ಇದೆ ಎಂಬ ಆರೋಪ ಇದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ ಹೆಗಡೆ ನೇತೃತ್ವದ ತಜ್ಞರ ಸಮಿತಿ ರಚಿಸಿ, 3 ತಿಂಗಳಲ್ಲಿ ವರದಿ ತರಿಸಿಕೊಂಡು ಬಳಿಕ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕೋಟ ತಿಳಿಸಿದರು.

ಹಾರಾಡಿ ರಾಮ ಗಾಣಿಗ ಹೆಸರಲ್ಲಿ ₹1 ಲಕ್ಷದ ಪ್ರಶಸ್ತಿ ನೀಡಲಿದ್ದು, ಪ್ರಶಸ್ತಿ ಮೊತ್ತವನ್ನು ಮುಜರಾಯಿ ಇಲಾಖೆಯೇ ನೀಡಲಿದೆ ಎಂದರು.

ಶಿಶು ಕಲ್ಯಾಣ ಇಲಾಖೆಯಿಂದ ನವಜೋಡಿಗೆ ₹10 ಸಾವಿರದ ಬಾಂಡ್ ನೀಡಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಹಿಂದೂ ಸಂಪ್ರದಾಯದಂತೆ ವಿವಾಹವಾಗುವವರಿಗೆ ಮಾತ್ರ ಈ ಸಾಮೂಹಿಕ ವಿವಾಹದಲ್ಲಿ ಅವಕಾಶ ಇದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT