ಮೀಸಲಾತಿ ಪಟ್ಟಿ ತಿದ್ದುಪಡಿ ಕೋಟ ಅಸಮಾಧಾನ

7

ಮೀಸಲಾತಿ ಪಟ್ಟಿ ತಿದ್ದುಪಡಿ ಕೋಟ ಅಸಮಾಧಾನ

Published:
Updated:
Deccan Herald

ಬ್ರಹ್ಮಾವರ: ಮೊದಲೇ ಪ್ರಕಟಗೊಳಿಸಿದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಚುನಾವಣೆ ಫಲಿತಾಂಶದ ನಂತರ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಬಿಜೆಪಿ ನ್ಯಾಯಾಲಯದ ಮೆಟ್ಟಿಲು ಏರಿದೆ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬ್ರಹ್ಮಾವರ ಬಳಿಯ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಚುನಾವಣೆ ಫಲಿತಾಂಶದ ಮೊದಲೇ ಮೀಸಲಾತಿ ಪಟ್ಟಿ ಪ್ರಕಟವಾಗಿತ್ತು. ಅದೇ ರೀತಿಯಲ್ಲಿ ಇದ್ದಲ್ಲಿ ಅದನ್ನು ನಾವು ಬೆಂಬಲಿಸುತ್ತಿದ್ದೆವು. ಆದರೆ, ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅದರಲ್ಲಿ ತಮಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿದ ಸರ್ಕಾರದ ವಿರುದ್ಧ ಬಿ.ಜೆ.ಪಿ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಸೂಕ್ತ ತೀರ್ಮಾನ ನೀಡಬಹುದೆಂಬ ವಿಶ್ವಾಸವಿದೆ. ಪ್ರಸಕ್ತ ಮೀಸಲಾತಿ ಪಟ್ಟಿಯಿಂದಾಗಿ ಬಹುಮತ ಪಡೆದ ಪಕ್ಷಕ್ಕೆ ಅನ್ಯಾಯವಾಗಿದೆ. ಬಹುಮತ ಇಲ್ಲದವರು ಅಧ್ಯಕ್ಷರಾದರೆ ಸಭೆಗಳು ಸರಿಯಾಗಿ ನಡೆಯದೇ ಆಡಳಿತ ಹಳಿ ತಪ್ಪುತ್ತದೆ ಎಂದರು.

ಮಂದಾರ್ತಿ ದೇವಸ್ಥಾನದಲ್ಲಿ ಆದ ಅವ್ಯವಹಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ನ್ಯಾಯಯುತವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಉತ್ತಮ ಆದಾಯವಿರುವ ದೇವಸ್ಥಾನಗಳಿಗೆ ವಿಭಾಗಾಧಿಕಾರಿ ಹುದ್ದೆಗೆ ಸರಿ ಸಮಾನವಾದ ಅಧಿಕಾರಿ ನೇಮಕ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಕಟೀಲು ಮತ್ತು ಮಂದಾರ್ತಿ ದೇವಸ್ಥಾನಗಳಲ್ಲಿಯೂ ಇಂತಹ ಅಧಿಕಾರಿಗಳ ನೇಮಕವಾಗಬೇಕು ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !