ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಅಪರೂಪದ ನಾಯಕ

Last Updated 23 ಏಪ್ರಿಲ್ 2018, 18:46 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಯಕ್ತಿಕವಾಗಿ ಉತ್ತಮ ಆಟ ಆಡಲು ಸಾಧ್ಯವಾಗದಿದ್ದರೂ ತಂಡವನ್ನು ಸಮರ್ಥವಾಗಿ ಮುನ್ನಡೆಸುವವರು ಒಳ್ಳೆಯ ನಾಯಕ ಎನಿಸಿಕೊಳ್ಳುತ್ತಾರೆ. ಈ ಅಪರೂಪದ ಗುಣವನ್ನು ವಿರಾಟ್ ಕೊಹ್ಲಿ ಅವರಲ್ಲಿ ಕಾಣಬಹುದು’ ಎಂದು ಆರ್‌ಸಿಬಿ ತಂಡದ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟರು.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್‌ ಲಯ ಕಂಡುಕೊಳ್ಳಲು ಆಗದಿದ್ದರೂ ಕೊಹ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ತಂಡಕ್ಕಾಗಿ ಶ್ರಮ ಹಾಕಿದ್ದಾರೆ. ತರಬೇತಿ ಕಾರ್ಯಕ್ರಮಗಳಲ್ಲಿ ತಂಡದ ಹುಮ್ಮಸ್ಸು ಹೆಚ್ಚುವಂತೆ ಮಾಡುತ್ತಾರೆ. ಇದು ಮುಂದಿನ ದಿನಗಳಲ್ಲಿ ಅವರಿಗೆ ನೆರವಾಗಲಿದ್ದು ಸಾಕಷ್ಟು ರನ್ ಗಳಿಸುವ ಭರವಸೆ ಇದೆ’ ಎಂದು ಡಿವಿಲಿಯರ್ಸ್‌ ಹೇಳಿದರು.

ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡಿದ ಅವರು ‘ಅಭಿಮಾನಿಗಳು ಮತ್ತು ಆಟಗಾರರ ನಡುವೆ ಹೇಳಲಾಗದ ಸಂಬಂಧವಿದೆ. ಪಂದ್ಯಗಳನ್ನು ಗೆಲ್ಲುತ್ತ ಸಾಗಿದಂತೆ ಮತ್ತು ಆಟಗಾರರು ವೈಯಕ್ತಿಕ‌ವಾಗಿ ಮಿಂಚಿದಾಗ ಅಭಿಮಾನಿಗಳು ಖುಷಿಪಡುತ್ತಾರೆ. ಆರ್‌ಸಿಬಿ ಅಭಿಮಾನಿಗಳಿಗೆ ಸದಾ ಖುಷಿ ನೀಡಲು ನಾವು ಶ್ರಮಿಸುತ್ತೇವೆ. ಕಪ್‌ ಗೆದ್ದು ಅವರಲ್ಲಿ ಅಂಭ್ರಮ ಉಕ್ಕುವಂತೆ ಮಾಡು ತ್ತೇವೆ’ ಎಂದರು.

‘ಐಪಿಎಲ್‌ನಲ್ಲಿ ಯುವ ಆಟಗಾರರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಟೂರ್ನಿಯ ಕೊನೆಯಲ್ಲಿ ಕೆಲವು ಸಮರ್ಥ ಆಟಗಾರರು ಕ್ರಿಕೆಟ್‌ ಲೋಕಕ್ಕೆ ಕೊಡುಗೆಯಾಗಿ ಸಿಗಲಿದ್ದಾರೆ’ ಎಂದ ಡಿವಿಲಿಯರ್ಸ್‌ ‘ಸ್ಪಿನ್ನರ್‌ಗಳ ವಿರುದ್ಧ ವಿಶೇಷ ರಣತಂತ್ರ ಅನುಸರಿಸುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತೇನೆ. ಬೌಲರ್‌ ಮೇಲೆ ಒತ್ತಡ ಹೇರಿ ಪರಿಸ್ಥಿತಿಯನ್ನು ನನಗೆ ಪೂರಕವಾಗುವಂತೆ ಮಾಡುತ್ತೇನೆ’ ಎಂದರು.

‘ಅನುಭವಿ ಆಟಗಾರ ಆಶಿಶ್ ನೆಹ್ರಾ ಅವರು ಬೌಲರ್‌ಗಳಿಗೆ ಉತ್ತಮ ಸಲಹೆ ನೀಡುತ್ತಿದ್ದಾರೆ. ಇದರಿಂದ ಬೌಲಿಂಗ್ ವಿಭಾಗದ ಮೇಲಿನ ಒತ್ತಡ ಕಡಿಮೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT