ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಪಟೈಟಿಸ್‌ ಸಿ ವೈರಸ್‌: ಮಣಿಪಾಲ್‌ನಿಂದ ತಜ್ಞರನ್ನು ಕರೆಸಲು ಚಿಂತನೆ

Last Updated 28 ಜೂನ್ 2019, 19:02 IST
ಅಕ್ಷರ ಗಾತ್ರ

ಕೆ.ಆರ್.ನಗರ (ಮೈಸೂರು ಜಿಲ್ಲೆ): ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾದ 30 ಮಂದಿಗೆ ಹೆಪಟೈಟಿಸ್ ಸಿ ಸೋಂಕು ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಣಿಪಾಲದ ‘ಸೆಂಟರ್‌ ಆಫ್‌ ವೈರಾಲಜಿ’ ಕೇಂದ್ರದಿಂದ ತಜ್ಞರನ್ನು ಕರೆಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

‘ಇಲ್ಲಿ ಡಯಾಲಿಸಿಸ್ ಕೇಂದ್ರ ನಡೆಸುತ್ತಿರುವ ಬಿ.ಆರ್.ಶೆಟ್ಟಿ ಕಂಪನಿಯೇ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಡಯಾಲಿಸಿಸ್ ನಡೆಸುತ್ತಿದೆ. ಒಂದು ವೇಳೆ ಸೋಂಕು ತಗುಲಿರುವುದು ದೃಢಪಟ್ಟರೆ, ಸೋಂಕು ತಗುಲಿರಬಹುದಾದ ಸಾಧ್ಯತೆಗಳನ್ನು ಪತ್ತೆ ಹಚ್ಚಲು ತಜ್ಞರನ್ನು ಕರೆಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಆರೋಗ್ಯ ಇಲಾಖೆಯ ಆಯುಕ್ತರು ಶುಕ್ರವಾರ ನೇರವಾಗಿ ಬಿ.ಆರ್.ಶೆಟ್ಟಿ ಕಂಪನಿಗೆ ನೋಟಿಸ್ ನೀಡಿ, ಈ ಆರೋಪಕ್ಕೆ ವಿವರಣೆ ಕೇಳಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT