ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಯಾಕೆ ಈ ಶಿಕ್ಷೆ, ಇದು ನ್ಯಾಯನಾ?: ಸ್ಪೀಕರ್‌ ರಮೇಶ್‌ ಕುಮಾರ್‌ ಬೇಸರ

Last Updated 11 ಫೆಬ್ರುವರಿ 2019, 7:31 IST
ಅಕ್ಷರ ಗಾತ್ರ

ಬೆಂಗಳೂರು: ಆಪರೇಷನ್‌ ಕಮಲ ವಿಚಾರವಾಗಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿರುವ ಆಡಿಯೊದಲ್ಲಿ ತಮ್ಮ ಹೆಸರನ್ನು ಉಲ್ಲೇಖವಾಗಿರುವಬಗ್ಗೆ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ.

‘ಸದನಕ್ಕೆ ಬರುವ ಮುನ್ನ ನಾನು ಮತ್ತೊಮ್ಮೆ ಆಡಿಯೊ ಕೇಳಿಸಿಕೊಂಡಿದ್ದೇನೆ. ನನ್ನ ಬಗ್ಗೆಯೇ ಆ ಮಾತು ಕೇಳಿ ಬಂದಿದೆ. ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನನಗೆ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಇವರೆಗೂ ಬಾಡಿಗೆ ಮನೆಯಲ್ಲಿದ್ದೇನೆ. ನನಗೆ ಯಾರು, ಎಲ್ಲಿ, ಯಾವಾಗ ಹಣ ಕೊಟ್ಟಿದ್ದಾರೆ? ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ‘ಇದು ಸದನದ ಹಕ್ಕುಚ್ಯುತಿ ಅಲ್ಲವೇ, ಇದನ್ನು ಸುಮ್ಮನೆಬಿಡಲು ಸಾಧ್ಯವಿಲ್ಲ. ಸದನದ ಹೊರಗೆ ಮಾತನಾಡಿದ್ದು ಕೂಡ ಹಕ್ಕುಚ್ಯುತಿಯಾಗುತ್ತದೆ. ಉನ್ನತ ಸ್ಥಾನದಲ್ಲಿರುವವರು ಹಾಗೇ ನಡೆದುಕೊಂಡಿರುವುದು ಸರಿಯಲ್ಲ’ ಎಂದರು.

ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಮಧು ಸ್ವಾಮಿ, ‘ಸ್ಪೀಕರ್‌ ಬಗ್ಗೆ ನಮಗೆ ಆಪಾರ ಗೌರವಿದೆ. ಆಡಿಯೊದಲ್ಲಿ ನಿಮ್ಮ ಹೆಸರು ಉಲ್ಲೇಖವಾಗಿರುವುದಕ್ಕೆ ನಾನಾ ವಿಷಾದ ವ್ಯಕ್ತಪಡಿಸುತ್ತೇನೆ’ ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT