₹30 ಕೋಟಿ ಕೊಡಲಿ, ನಾವೇ ಹೋಗ್ತೀವಿ: ಈಶ್ವರಪ್ಪ ವ್ಯಂಗ್ಯ

7

₹30 ಕೋಟಿ ಕೊಡಲಿ, ನಾವೇ ಹೋಗ್ತೀವಿ: ಈಶ್ವರಪ್ಪ ವ್ಯಂಗ್ಯ

Published:
Updated:

ದಾವಣಗೆರೆ: ‘ಬಿಜೆಪಿಯವರು ₹30 ಕೋಟಿ-40 ಕೋಟಿ‌ ಕೊಟ್ಟು ಆಪರೇಷನ್‌ ಕಮಲ ಮಾಡುತ್ತಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ನಮಗೇ ಅಷ್ಟು ಹಣ ಕೊಡಲಿ... ನಾವೇ ಹೋಗುತ್ತೇವೆ’ ಎಂದು ಬಿಜೆಪಿಯ ಶಾಸಕ ಕೆ.ಎಸ್. ಈಶ್ವರಪ್ಪ ಅವರು ವ್ಯಂಗ್ಯವಾಡಿದರು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ‘ಸಿದ್ದರಾಮಯ್ಯ ಹುಚ್ಚರು. ಪ್ರಕೃತಿ ಚಿಕಿತ್ಸಾಲಯದಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಅಂತಾರೆ. ಹೊರಬಂದು ಮುಂದಿನ ಮುಖ್ಯಮಂತ್ರಿ ತಾವೇ ಅಂತಾರೆ. ಚುನಾವಣೆ ನಂತರ ಕಾಂಗ್ರೆಸ್ ದಿಕ್ಕೆಟ್ಟು ಹೋಗಿದೆ. ನಾಯಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಶಾಸಕರು ಕೊಲೆ ಮಾಡುವ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಸಮನ್ವಯ ಸಮಿತಿ ಸ್ಥಾನಕ್ಕೆ ರಾಜೀನಾಮೆ‌ ನೀಡಲಿ’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !