ಕೆ- ಶಿಪ್ ಕಚೇರಿ ಸ್ಥಳಾಂತರಕ್ಕೆ ವಿರೋಧ

7

ಕೆ- ಶಿಪ್ ಕಚೇರಿ ಸ್ಥಳಾಂತರಕ್ಕೆ ವಿರೋಧ

Published:
Updated:

ಬೆಳಗಾವಿ: ‘ಕೆ–ಶಿಪ್ ಕಚೇರಿಗಳ ಸ್ಥಳಾಂತರ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಈ ಭಾಗದಲ್ಲಿ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆಯೇ ಎನ್ನುವುದನ್ನು ಮೊದಲು ಸಾಬೀತುಪಡಿಸಲಿ’ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ  ಭಾನುವಾರ ಇಲ್ಲಿ ಸವಾಲು ಹಾಕಿದರು.

ಹಿಡಕಲ್‌ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಥಳಾಂತರ ಆದೇಶ ಕೈಬಿಡಬೇಕು. ಇತರ ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು’ ಎಂದೂ ಒತ್ತಾಯಿಸಿದರು.

ಇದೇ ವೇಳೆ, ಕಚೇರಿ ಸ್ಥಳಾಂತರ ನಿರ್ಧಾರ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಅವುಗಳನ್ನು ಇಲ್ಲಿಯೇ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರೆಲ್ಲ ಸೇರಿ ಒತ್ತಡ ತರುವುದಾಗಿಯೂ ಅವರು ಹೇಳಿದರು.

‘ರಾಜ್ಯದಲ್ಲಿ ಎಚ್‌.ಡಿ. ರೇವಣ್ಣ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ’ ಎಂಬ ಬಿಜೆಪಿ ಮುಖಂಡರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಮಾಣವಚನ ಸ್ವೀಕರಿಸಿರುವವರು ಕುಮಾರಸ್ವಾಮಿಯೋ, ರೇವಣ್ಣನೋ?’ ಎಂದು ಕೇಳಿದರು.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಕಚೇರಿಗಳ ಸ್ಥಳಾಂತರ ಆಯಾ ಇಲಾಖೆಗಳ ಆಂತರಿಕ ವಿಚಾರ. ಅದ್ಯಾವುದೂ ನನ್ನ ಗಮನಕ್ಕೆ ಬರುವುದಿಲ್ಲ. ಸಂಬಂಧಪಟ್ಟವರನ್ನೇ ಕೇಳಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !