ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಇಲೆವನ್ ತಂಡದಲ್ಲಿ ರಶೀದ್ ಖಾನ್‌

Last Updated 23 ಏಪ್ರಿಲ್ 2018, 20:30 IST
ಅಕ್ಷರ ಗಾತ್ರ

ಲಂಡನ್‌: ಅಫ್ಗಾನಿಸ್ಥಾನದ ಲೆಗ್‌ ಸ್ಪಿನ್ನರ್‌ ರಶೀದ್ ಖಾನ್‌ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕೈಕ ಟ್ವೆಂಟಿ–20 ಪಂದ್ಯಕ್ಕಾಗಿ ವಿಶ್ವ ಇಲೆವನ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ವೆಸ್ಟ್ ಇಂಡೀಸ್‌ನಲ್ಲಿ ಕಳೆದ ಬಾರಿ ಹಾನಿ ಗೊಂಡ ಕ್ರೀಡಾಂಗಣದ ನವೀಕರಣಕ್ಕೆ ನಿಧಿ ಸಂಗ್ರಹಿಸಲು ಈ ಪಂದ್ಯವನ್ನು ಆಯೋಜಿಸಲಾಗಿದೆ. ಲಾರ್ಡ್ಸ್‌ನಲ್ಲಿ ಮೇ 31ರಂದು ಪಂದ್ಯ ನಡೆಯಲಿದೆ.

ಆಯ್ಕೆ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿದ ರಶೀದ್‌ ‘ಇದೊಂದು ದೊಡ್ಡ ಗೌರವ. ಈ ಆಯ್ಕೆಯ ಮೂಲಕ ನನ್ನ ದೇಶಕ್ಕೂ ಗೌರವ ಸಲ್ಲಿಸಲಾಗಿದೆ ಎಂಬುದು ನನ್ನ ಭಾವನೆ’ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ಶಕೀಬ್ ಅಲ್‌ ಹಸನ್‌, ತಮೀಮ್ ಇಕ್ಬಾಲ್‌, ಶ್ರೀಲಂಕಾದ ತಿಸಾರ ಪೆರೇರ, ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಶೋಯೆಬ್‌ ಮಲಿಕ್‌ ಕೂಡ ತಂಡದಲ್ಲಿದ್ದಾರೆ. ರಶೀದ್ ಖಾನ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT