ಕೆಎಸ್‌ಒಯುಗೆ 10ರೊಳಗೆ ಮಾನ್ಯತೆ ಭಾಗ್ಯ?

7
ಯುಜಿಸಿಗೆ ಪತ್ರ ರವಾನಿಸಿದ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್

ಕೆಎಸ್‌ಒಯುಗೆ 10ರೊಳಗೆ ಮಾನ್ಯತೆ ಭಾಗ್ಯ?

Published:
Updated:
Deccan Herald

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಒಯು) ಆ. 10ರೊಳಗೆ ಮಾನ್ಯತೆ ನೀಡುವಂತೆ ಆದೇಶಿಸಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಅವರು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಆದೇಶಿಸಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, ‘ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಭವಿಷ್ಯವನ್ನು ನಿಶ್ಚಿತ ಗುರಿ ಮುಟ್ಟಿಸುವಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ’ ಎಂದು ಬರೆದಿದ್ದಾರೆ.

ಸಚಿವ ಪ್ರಕಾಶ ಜಾವಡೇಕರ್‌ ಅವರನ್ನು ಭೇಟಿ ಮಾಡಿರುವ ಸದಾನಂದಗೌಡ, ವಿ.ವಿ.ಗೆ ಮಾನ್ಯತೆ ದೊರಕಿಸಿಕೊಡುವಂತೆ ಲಿಖಿತವಾಗಿ ಕೋರಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರು, ಯುಜಿಸಿಗೆ ಪತ್ರ ಬರೆದು, ಮಾನ್ಯತೆ ದೊರಕಿಸಿಕೊಡಬೇಕು. ಆ. 10ರೊಳಗೆ ಮಾನ್ಯತೆ ನೀಡಬೇಕು. ಕೆಎಸ್‌ಒಯು ಕುಲಪತಿಗೆ ಈ ಕುರಿತು ಪತ್ರ ರವಾನೆ ಮಾಡಬೇಕು ಎಂದು ಯುಜಿಸಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಜುಲೈ 4ರಂದು ನಡೆದಿದ್ದ ಸಭೆ: ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ನೇತೃತ್ವದ ಕೆಎಸ್‌ಒಯು ನಿಯೋಗವು ಜುಲೈ 4ರಂದು ಯುಜಿಸಿಗೆ ಭೇಟಿ ನೀಡಿ ಮಾನ್ಯತೆ ಕೋರಿ ಅಗತ್ಯ ದಾಖಲೆ ಪೂರೈಸಿತ್ತು. ಜುಲೈ ಅಂತ್ಯದಲ್ಲಿ ನಡೆದ ಯುಜಿಸಿ ಆಂತರಿಕ ಸಭೆಯಲ್ಲೂ ಮಾನ್ಯತೆ ನೀಡುವ ಕುರಿತು ಸಕಾರಾತ್ಮಕ ಚರ್ಚೆ ನಡೆದಿತ್ತು.

‘ಆಗಸ್ಟ್‌ 10ರೊಳಗೆ ಮಾನ್ಯತೆ ಸಿಕ್ಕರೆ ತಕ್ಷಣ ಜಾಹೀರಾತು ನೀಡಿ, ಪ್ರವೇಶ ಕಾರ್ಯ ಆರಂಭಿಸಲಾಗುವುದು’ ಎಂದು ಕುಲಪತಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !