ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು: ಪ್ರಾದೇಶಿಕ ನಿರ್ದೇಶಕರ ವರ್ಗಾವಣೆ ತಡೆಹಿಡಿದ ಕುಲಪತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
Last Updated 4 ಜೂನ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಪ್ರಾದೇಶಿಕ ನಿರ್ದೇಶಕರ ವರ್ಗಾವಣೆ ಆದೇಶವನ್ನು ನೂತನ ಕುಲಪತಿ ಪ್ರೊ.ವಿದ್ಯಾಶಂಕರ್ ತಡೆಹಿಡಿದಿದ್ದಾರೆ.

ಕೆಎಸ್‌ಒಯುಗೆ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 18 ಪ್ರಾದೇಶಿಕ ಕೇಂದ್ರಗಳಿವೆ. ಈ ಪೈಕಿ 7 ಪ್ರಾದೇಶಿಕ ನಿರ್ದೇಶಕರನ್ನು ವರ್ಗಾವಣೆ ಮಾಡಿ ಹಿಂದಿನ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಮೇ 27ರಂದು ಆದೇಶ ಮಾಡಿದ್ದರು. ಈ ಆದೇಶವನ್ನು ತಡೆಹಿಡಿದಿದ್ದು, ಆಯಾ ಕೇಂದ್ರಗಳಲ್ಲೇ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

‘ವರ್ಗಾವಣೆಗೆ ಸೂಕ್ತ ಮಾನದಂಡ ನಿಗದಿಪಡಿಸಿಲ್ಲ. ಕಾರ್ಯಕ್ಷಮತೆ, ಸೇವಾ ಅವಧಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಿಲ್ಲ. ಹೀಗಾಗಿ, ಈ ಕುರಿತು ವಿ.ವಿ ನಿರ್ಧಾರ ಕೈಗೊಳ್ಳಬೇಕಿದೆ. ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಈ ವಿಷಯ ಮಂಡಿಸಿ ಚರ್ಚಿಸಲಾಗುವುದು’ ಎಂದು ಪ್ರೊ.ವಿದ್ಯಾಶಂಕರ್ ಪ್ರತಿಕ್ರಿಯಿಸಿದರು.

‘ಕುಲಪತಿ ಅವಧಿ ಮುಗಿಯುವುದಕ್ಕೆ 6 ತಿಂಗಳಿರುವಂತೆ ವರ್ಗಾವಣೆ, ನೇಮಕಾತಿ ಸಂಬಂಧಿಸಿದಂತೆ ಆದೇಶ ಮಾಡುವಂತಿಲ್ಲ. ಆದರೆ, ಮೇ 27ರಂದು ಈ ಆದೇಶವಾಗಿದೆ. ಆದೇಶವನ್ನು ರದ್ದುಪಡಿಸಿಲ್ಲ, ಬದಲಿಗೆ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT