ಶನಿವಾರ, ಸೆಪ್ಟೆಂಬರ್ 19, 2020
22 °C
ಮಂಗಳೂರು, ದಾವಣಗೆರೆ, ಶಿವಮೊಗ್ಗ, ಮೈಸೂರಿನಿಂದ ನೇರ ಬಸ್

ತಿರುಪತಿ ಪ್ಯಾಕೇಜ್ ಪ್ರವಾಸ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು–ತಿರುಪತಿ ಪ್ಯಾಕೇಜ್‌ ಪ್ರವಾಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿ–ತಿರುಮಲಕ್ಕೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಪ್ರವಾಸ ವಿಸ್ತರಿಸಿದೆ.

ಮಂಗಳೂರು, ದಾವಣಗೆರೆ, ಶಿವಮೊಗ್ಗದಿಂದ ತಿರುಪತಿ–ಕಾಳಹಸ್ತಿ ಪ್ಯಾಕೇಜ್‌ ‍ಪ್ರವಾಸ ಆರಂಭವಾಗಿದೆ. ಐರಾವತ ಕ್ಲಬ್‌ ಕ್ಲಾಸ್‌ ಬಸ್‌ನಲ್ಲಿ ಪ್ರವಾಸ ಕರೆದೊಯ್ಯಲಾಗುವುದು. ಹೋಟೆಲ್‌ನಲ್ಲಿ ಫ್ರೆಶ್‌ಅಪ್, ಪದ್ಮಾವತಿದೇವಿ ದರ್ಶನ, ಉಪಾಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ ಮತ್ತು ಊಟ, ತಿರುಪತಿ ಸ್ಥಳೀಯ ದೇವಸ್ಥಾನಗಳ ದರ್ಶನ, ಕಾಳಹಸ್ತಿ ದೇವಸ್ಥಾನದಲ್ಲಿ ರಾತ್ರಿ ಊಟ ಮತ್ತು ತಂಗಲು ವ್ಯವಸ್ಥೆ ಮಾಡಲಾಗುವುದು.

ಬೆಳಿಗ್ಗೆ ದೇಗುಲ ದರ್ಶನ, ಉಪಾಹಾರ ಮತ್ತು ಮಧ್ಯಾಹ್ನದ ಊಟ ವ್ಯವಸ್ಥೆ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ಮೈಸೂರು–ತಿರುಪತಿ ಪ್ಯಾಕೇಜ್‌ನಲ್ಲಿ ಹೋಟೆಲ್‌ನಲ್ಲಿ ಫ್ರೆಶ್‌ಅಪ್, ಪದ್ಮಾವತಿದೇವಿ ದರ್ಶನ, ಉಪಾಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರದರ್ಶನ ಮತ್ತು ಊಟ ಒಳಗೊಂಡಿದೆ. 

ಸಾರ್ವಜನಿಕರು ಪ್ಯಾಕೇಜ್‌ ಪ್ರವಾಸಕ್ಕೆ ನಿಗಮದ ಕೌಂಟರ್, ಖಾಸಗಿ ಬುಕಿಂಗ್‌, ಆನ್‌ಲೈನ್ ಮತ್ತು ಮೊಬೈಲ್‌ ಮೂಲಕ 30 ದಿನಗಳ ಮುಂಚಿತವಾಗಿ ಕಾಯ್ದಿರಿಸಬಹುದು.

ಹೆಚ್ಚಿನ ಮಾಹಿತಿಗೆ: 7760990034/35, 080–49596666 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು