ಕೋತಿಗೆ ಸ್ಟೇರಿಂಗ್‌ ಕೊಟ್ಟು ಕೆಲಸಕ್ಕೆ ಕುತ್ತು ತಂದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

7

ಕೋತಿಗೆ ಸ್ಟೇರಿಂಗ್‌ ಕೊಟ್ಟು ಕೆಲಸಕ್ಕೆ ಕುತ್ತು ತಂದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

Published:
Updated:
Deccan Herald

ಬೆಂಗಳೂರು: ಸ್ಟೇರಿಂಗ್‌ ಮೇಲೆ ಕೋತಿಯನ್ನು ಕೂರಿಸಿ ಬಸ್‌ ಚಾಲನೆ ಮಾಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಚಾಲಕ ತನ್ನ ನೌಕರಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. 

ಹನುಮಾನ್‌ ಲಂಗೂರ್‌ ಪ್ರಭೇದದ ಕೋತಿಯನ್ನು ಚಾಲಕ ಪ್ರಕಾಶ್‌ ಸ್ಟೇರಿಂಗ್‌ ಮೇಲೆ ಕೂರಿಸಿಕೊಂಡು ಬಸ್‌ ಮುನ್ನಡೆಸಿದ್ದರು. ಕೋತಿ ಮನ ಬಂದಂತೆ ಸ್ಟೇರಿಂಗ್‌ ಅನ್ನು ಅತ್ತಿತ್ತ ತಿರುಗಿಸುವುದು, ಚಾಲಕ ಅದನ್ನು ನಿಯಂತ್ರಿಸುತ್ತ ಬಸ್‌ ಚಾಲನೆ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ವಿಡಿಯೊ ಸುದ್ದಿಯಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಚಾಲಕನನ್ನು ಅಮಾನತು ಮಾಡಿ, ವಿಚಾರಣೆ ನಡೆಸುವಂತೆ ದಾವಣಗೆರೆ ಘಟಕದ ಸೆಕ್ಯುರಿಟಿ ಇನ್‌ಸ್ಪೆಕ್ಟರ್‌ಗೆ ಸೂಚಿಸಿರುವುದಾಗಿ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. 

ಅಕ್ಟೋಬರ್‌ 1ರಂದು ದಾವಣಗೆರೆಯಿಂದ ಭರಮಸಾಗರದ ಕಡೆಗೆ ಸಂಚರಿಸುತ್ತ ಬಸ್‌ನಲ್ಲಿ ಕೋತಿ ಸ್ಟೇರಿಂಗ್‌ ಹಿಡಿದು ಚಾಲನೆ ಮಾಡಿದ ಘಟನೆ ವಿಡಿಯೊದಲ್ಲಿ ದಾಖಲಾಗಿತ್ತು.  

ಟೀಚರ್‌ ಜತೆ ಪ್ರಯಾಣ: ದಾವಣಗೆರೆ–ಭರಮಸಾಗರ ಬಸ್‌ನಲ್ಲಿ ನಿತ್ಯವೂ ಪ್ರಯಾಣಿಸುವ ಶಿಕ್ಷಕರೊಬ್ಬರ ಜತೆಯಲ್ಲಿ ಹನುಮಾನ್‌ ಲಂಗೂರ್‌ ಕೂಡ ಇರುತ್ತದೆ. ಆ ದಿನ ಚಾಲಕನ ಸೀಟ್‌ನತ್ತ ಜಿಗಿದ ಲಂಗೂರ್‌, ಸ್ಟೇರಿಂಗ್ ಬಿಟ್ಟು ಬರಲು ವಿರೋಧ ತೋರಿದೆ. ಪ್ರಯಾಣಿಕರು ಎಷ್ಟೇ ಪ್ರಯತ್ನಿಸಿದರೂ ಕೋತಿ ಸ್ಟೇರಿಂಗ್‌ ಬಿಟ್ಟು ಬಂದಿಲ್ಲ. ಪ್ರಾಣಿಪ್ರಿಯನಾದ ಚಾಲಕ ಪ್ರಕಾಶ್‌, ಅದನ್ನು ಕುಳಿತುಕೊಳ್ಳಲು ಬಿಟ್ಟು ಚಾಲನೆ ಮುಂದುವರಿಸಿದ್ದಾರೆ. ಆದರೆ, 3–4 ನಿಮಿಷಗಳಲ್ಲಿ ಮುಂದಿನ ನಿಲ್ದಾಣ ಬರುತ್ತಿದ್ದಂತೆ ಕೋತಿ ಇಳಿದು ಹೋಗಿದೆ. ಈ ಬಗ್ಗೆ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 30

  Happy
 • 3

  Amused
 • 2

  Sad
 • 3

  Frustrated
 • 3

  Angry

Comments:

0 comments

Write the first review for this !