ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಯಾನ ದುಬಾರಿ; ಶೇ 12ರಷ್ಟು ದರ ಏರಿಸಿದ ಕೆಎಸ್‌ಆರ್‌ಟಿಸಿ

Last Updated 26 ಫೆಬ್ರುವರಿ 2020, 1:56 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೆಎಸ್‌ಆರ್‌ಟಿಸಿ, ವಾಯವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರವನ್ನು ಶೇ 12 ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಬಸ್‌ ಪ್ರಯಾಣ ದರ ಏರಿಕೆ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ₹100 ಕೊಡಬೇಕಿದ್ದ ಪ್ರಯಾಣಿಕರು ದರ ಪರಿಷ್ಕರಣೆ ಬಳಿಕ ₹12 ಹೆಚ್ಚುವರಿಯಾಗಿ ಪಾವತಿಸ
ಬೇಕಾಗುತ್ತದೆ. ₹500 ಟಿಕೆಟ್‌ ದರ ಇದ್ದರೆ ₹60 ಹೆಚ್ಚುವರಿ ಹೊರೆ ಹೊರಬೇಕಾಗುತ್ತದೆ. ಆದರೆ, ಈ ಏರಿಕೆ ಬಿಎಂಟಿಸಿಗೆ ಅನ್ವಯವಾಗುವುದಿಲ್ಲ.

ಮೂರೂ ಸಾರಿಗೆ ಸಂಸ್ಥೆ ನಿಗಮಗಳು ಬಸ್‌ ಪ್ರಯಾಣ ದರ ಏರಿಸುವಂತೆ ಮೈತ್ರಿ ಸರ್ಕಾರ ಇದ್ದಾಗಲೇ ಪ್ರಸ್ತಾವನೆ ಸಲ್ಲಿಸಿದ್ದವು. ಆಗ ಆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ಬಂದಾಗಲೂ ನಿಗಮಗಳು ಮತ್ತೊಮ್ಮೆ ಪ್ರಸ್ತಾವನೆ ಮುಂದಿಟ್ಟಿದ್ದವು. ದರ ಏರಿಕೆ ಪ್ರಸ್ತಾವನೆಯನ್ನು ಸರ್ಕಾರ ಮುಂದೂಡುತ್ತಲೇ ಬಂದಿತ್ತು.

ಈ ಮೊದಲು 2014 ರ ಮೇ ತಿಂಗಳಿನಲ್ಲಿ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆ ಬಳಿಕ ಏರಿಕೆ ಮಾಡಿಲ್ಲ. ಡೀಸೆಲ್‌ ದರ ಲೀಟರ್‌ಗೆ ಶೇ 11.27 ರಷ್ಟು ಹೆಚ್ಚಳವಾಗಿದೆ. ಇಂಧನ ದರ ಪರಿಷ್ಕರಣೆಯಿಂದ ನಿಗಮಕ್ಕೆ ₹260.83 ಕೋಟಿ ಹೊರೆ ಆಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.

ನಿಗಮದ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆ ಪರಿಷ್ಕರಣೆಯಿಂದಾಗಿ ಕಾರ್ಯಾಚರಣೆಯ ವೆಚ್ಚದಲ್ಲಿ ₹340.38 ಕೋಟಿ ಅಧಿಕವಾಗಿದೆ. ಒಟ್ಟಾರೆ ಹೊರೆ ಪ್ರತಿ ವರ್ಷ ₹601.21 ಕೋಟಿ ಆಗುತ್ತಿದೆ ಎಂದೂ ತಿಳಿಸಿದೆ.

ವಿದ್ಯಾರ್ಥಿಗಳ ಪಾಸ್‌ಗಿಲ್ಲ ಹೊರೆ

- ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಅಂಗವಿಕಲರ ಬಸ್‌ ಪಾಸ್‌ ದರ ಹೆಚ್ಚಳ ಆಗುವುದಿಲ್ಲ.

-ಗ್ರಾಮೀಣ ಪ್ರದೇಶಗಳ ಜನರ ಹೊರೆ ಕಡಿಮೆ ಮಾಡಲು ಸಾಮಾನ್ಯ ಸಾರಿಗೆಗಳಲ್ಲಿ ಮೊದಲ 3 ಕಿ.ಮೀಗಳವರೆಗೆ ಇದ್ದ ಪ್ರಯಾಣ ದರ ₹ 7 ಅನ್ನು ₹ 5 ಕ್ಕೆ ಇಳಿಸಲಾಗಿದೆ.

-ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮೊದಲ 12 ಮತ್ತು 15 ಕಿ.ಮೀವರೆಗಿನ ಪ್ರಯಾಣ ದರ ಏರಿಕೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT