ಬೆಂಗಳೂರಿನಿಂದ ಕೇರಳಕ್ಕೆ ಬಸ್‌ ಸಂಚಾರ; ಕುಂದಾಪುರಕ್ಕೆ ವೋಲ್ವೊ ಬಸ್‌ ಸೇವೆ

7
ಕೆಎಸ್ಆರ್‌ಟಿಸಿ ಬಸ್‌

ಬೆಂಗಳೂರಿನಿಂದ ಕೇರಳಕ್ಕೆ ಬಸ್‌ ಸಂಚಾರ; ಕುಂದಾಪುರಕ್ಕೆ ವೋಲ್ವೊ ಬಸ್‌ ಸೇವೆ

Published:
Updated:
Deccan Herald

ಬೆಂಗಳೂರು: ಶನಿವಾರ ಕೇರಳದ ಕೆಲ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿವೆ. ಬೆಂಗಳೂರಿನಿಂದ ಕೋಯಿಕೋಡ್‌(ಕ್ಯಾಲಿಕಟ್‌)ಗೆ ಮೂರು ವೋಲ್ವೊ ಐರಾವತ ಕ್ಲಬ್‌ ಕ್ಲಾಸ್ ಬಸ್‌ಗಳಲ್ಲಿ 120ಕ್ಕೂ ಹೆಚ್ಚು ಮಂದಿ ಪ್ರಯಾಣ ಬೆಳೆಸಿದ್ದಾರೆ. 

ಬೆಂಗಳೂರು–ಕ್ಯಾಲಿಕಟ್‌ ಮಾರ್ಗದಲ್ಲಿ ಬೆಳಿಗ್ಗೆ 6 ಗಂಟೆಗೆ 45 ಪ್ರಯಾಣಿಕರು, 7 ಗಂಟೆಗೆ 37 ಪ್ರಯಾಣಿಕರು ಹಾಗೂ 8ಕ್ಕೆ ಹೊರಟ ಬಸ್‌ನಲ್ಲಿ 42 ‍ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕ್ಯಾಲಿಕಟ್‌ನಿಂದ ಬೆಂಗಳೂರಿಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸಲಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ಬೇರೆ ಮಾರ್ಗದಲ್ಲಿ ವೋಲ್ವೊ ಬಸ್‌ ಸೇವೆ ಒದಗಿಸಲಿದೆ. ಭಾರೀ ಮಳೆಯ ಕಾರಣ ಮಂಗಳೂರು ಭಾಗಕ್ಕೆ ಎಕ್ಸ್‌ಪ್ರೆಸ್‌ ಬಸ್‌ಗಳು ಮಾತ್ರ ಸಂಚರಿಸುತ್ತಿದ್ದವು. ಆದರೆ, ಫಾಲ್ಘಾಟ್‌–ತ್ರಿಸೂರ್‌–ಎರ್ನಾಕುಲಂ ಮಾರ್ಗದಲ್ಲಿ ಬಸ್‌ ಸಂಚಾರ ಸಾಧ್ಯವಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ 13 ಬಸ್‌ ಸೇವೆಗಳನ್ನು ನೀಡುತ್ತಿತ್ತು. 

ಮೂರು ದಿನಗಳಲ್ಲಿ ₹89.33 ಲಕ್ಷ ನಷ್ಟ

ಆ. 9ರಿಂದ 17ರವರೆಗೆ 918 ಟ್ರಿಪ್‌ಗಳನ್ನು ಕಡಿತಗೊಳಿಸಿದ್ದು, 8,415 ಸೀಟುಗಳು ರದ್ದಾಗಿವೆ. ₹ 52,78,126 ಮೊತ್ತವನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಶುಕ್ರವಾರ ರಾತ್ರಿ 11.50ರವರೆಗಿನ ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿತ್ತು. ಮೂರು‌ ದಿನಗಳಿಂದ ಬಸ್‌ ಸೇವೆಗಳನ್ನು ರದ್ದುಗೊಳಿಸಿದ ಕಾರಣ ಕೆಎಸ್ಆರ್‌ ಟಿಸಿಗೆ ₹ 89.33 ಲಕ್ಷ ನಷ್ಟ ಉಂಟಾಗಿದೆ. 706 ಮಾರ್ಗಗಳಲ್ಲಿ ಹಾಗೂ 2,66,401 ಕಿಲೋಮೀಟರ್‌ ಓಡಾಟ ಸ್ಥಗಿತಗೊಂಡಿದೆ.

ವೋಲ್ವೋ ಮತ್ತು ಮಲ್ಟಿ ಆ್ಯಕ್ಸೆಲ್‌ ವೋಲ್ವೋ ವಾಹನಗಳ ಸಂಚಾರವನ್ನು ಹೊಸ ಮಾರ್ಗದಲ್ಲಿ ನಡೆಸಲಾಗಿದೆ. ಮಂಗಳೂರು– ಕಾರ್ಕಳ – ಎಸ್‌.ಕೆ.ಬಾರ್ಡರ್‌ – ಕುದುರೆಮುಖ – ಕಳಸ – ಕೊಟ್ಟಿಗೆಹಾರ – ಮೂಡಿಗೆರೆ– ಹಾಸನ ಮಾರ್ಗವಾಗಿ ಈ ಬಸ್‌ಗಳು ಬೆಂಗಳೂರಿಗೆ ಬರುತ್ತಿವೆ.

ಇನ್ನಷ್ಟು:

ಕೇರಳ ಜಲಪ್ರಳಯ: ಕೊಚ್ಚಿಯಲ್ಲಿ ಪ್ರಧಾನಿ ಮೋದಿ ತುರ್ತು ಸಭೆ

ಕಬಿನಿಯಿಂದ 75 ಸಾವಿರ ಕ್ಯುಸೆಕ್ ನೀರು ಬಿಡುಗಡೆ: ನಂಜನಗೂಡು ಮುಳುಗಡೆ

ಕೊಡಗಿನಲ್ಲಿ ನಿಲ್ಲದ ಬಿರುಗಾಳಿ, ಮಳೆ: ರಕ್ಷಣಾ ಕಾರ್ಯ‌ ಮತ್ತಷ್ಟು ವಿಳಂಬ ಸಾಧ್ಯತೆ

ಮಳೆಗೆ ನಲುಗಿದ ಕೊಡಗು: ನರಕವಾದ ಬದುಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !