ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ತಾಂತ್ರಿಕ ಸಿಬ್ಬಂದಿ ನೇಮಕಾತಿ ಪರೀಕ್ಷೆ ಮುಂದಕ್ಕೆ

Last Updated 22 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿ ನೇಮಕಾತಿಗೆಲಿಖಿತ ಪರೀಕ್ಷೆ ಮುಂದೂಡಲಾಗಿದೆ.

ಈ ಪರೀಕ್ಷೆಗಳು ಆ. 25ಮತ್ತು 26ರಂದು ನಡೆಯಬೇಕಿತ್ತು. ಕರಾವಳಿ, ಕೊಡಗು, ಮಲೆನಾಡು ಭಾಗಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿ
ಸಿದ್ದು,ಈ ಭಾಗದ ಅಭ್ಯರ್ಥಿಗಳು ಕೋರಿದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ. ದಿನಾಂಕವನ್ನು ನಿಗಮದ ವೆಬ್‌ಸೈಟ್‌ www.ksrtcjobs.com ಮತ್ತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ನಿಗಮದಲ್ಲಿ ತಾಂತ್ರಿಕ ಸಹಾಯಕರ 558, ಸಹಾಯಕ ಸಂಚಾರ ಇನ್ಸ್‌ಪೆಕ್ಟರ್‌ 124, ಸಹಾಯಕ ಸ್ಟೋರ್‌ ಕೀಪರ್‌ 24, ಲೆಕ್ಕ ಪತ್ರ ಸಹಾಯಕರ 86, ಕರಕುಶಲಕರ್ಮಿ 276, ಸಾಂಖ್ಯಿಕ ಸಹಾಯಕರ 48 ಸೇರಿದಂತೆ ಒಟ್ಟು 1,116 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT