ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣ

Last Updated 18 ಜುಲೈ 2019, 6:38 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದಮುಖ್ಯಮಂತ್ರಿ ಕುಮಾರಸ್ವಾಮಿಮತದ ಪರ ಭಾಷಣ ಮಾಡಿದರು.

ಇದೇ ವೇಳೆವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಸದನದಲ್ಲಿ ಮಾತನಾಡಿಸದನದ ಶಾಸಕರ ಸಂಖ್ಯೆ ಗಮನಿಸಿ ಕೆಲವರಿಗೆ ಮಾತ್ರ ಮಾತನಾಡಲು ಅವಕಾಶ ಕೊಡಿ, ಒಂದೇ ದಿನದಲ್ಲಿ ಚರ್ಚೆ ಮುಗಿಸಿದ ನಿದರ್ಶನಗಳು ನಮ್ಮ ಮುಂದೆ ಇವೆ. ಬೇಗನೇ ಮತಕ್ಕೆ ಹಾಕಿ ಎಂದು ಬೇಡಿಕೆ ಮಂಡಿಸಿದರು.

ನಂತರ ಮುಖ್ಯಮಂತ್ರಿಗಳುವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ ಮೇಲಿನ ಭಾಷಣ ಮಾಡಿದರು.

ರಮೇಶ್‌ಕುಮಾರ್‌ ಅವರಂಥ ಅಧ್ಯಯನ ಶೀಲರು ನನ್ನ ಅವಧಿಯಲ್ಲಿ ಸ್ಪೀಕರ್‌ ಆಗಿದ್ದು ನನ್ನ ಸೌಭಾಗ್ಯ. ನನ್ನ ತಂದೆ ಮುಖ್ಯಮಂತ್ರಿಯಾದಾಗಲೂ ತಾವೇ ಸ್ಪೀಕರ್‌ ಆಗಿದ್ದಿರಿ. ಆಗಲೂ ರಾಜಕೀಯ ವಿಪ್ಲವಗಳು ನಡೆದಿದ್ದವು. ಈಗಲೂ ನಡೆಯುತ್ತಿವೆ, ಕಾಲ ಮಿತಿಯೊಳಗೆ ವಿಶ್ವಾಸ ಮತ ಪೂರ್ಣಗೊಳಿಸಬಾರದು, ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ನಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎನ್ನುವ ಭಿನ್ನಮತೀಯ ಶಾಸಕರು ಕೋರ್ಟ್‌ನಲ್ಲಿ ಹೋಗಿ ಬೇರೆಯದ್ದೇ ಮಾತನಾಡಿದ್ದಾರೆ. ನನ್ನ ಮೇಲೆ ಆರೋಪಗಳ ಸುರಿ ಮಳೆ ಮಾಡಿದ್ದಾರೆ. ಇಲ್ಲಿ ಕೆಲವರಿಗೆ ಮಾನ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ.ನಾನು ಇನ್ನೂ ಮರ್ಯಾದೆ ಇಟ್ಟುಕೊಂಡು ಬದುಕಿದ್ದೇನೆ. 14 ತಿಂಗಳ ರಾಜಕೀಯ ಅಸ್ಥಿರಕ್ಕೆ ಯಾರು ಕಾರಣ, ಏನೇನು ನಡೆದಿದೆ ಎಂಬುದರ ಅರಿವು ನನಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕರ್ನಾಟಕಕ್ಕೆ ಬಂದಾಗ ಪ್ರಧಾನಿಗಳು ಸರ್ಕಾರದ ವಿರುದ್ಧ ಆಡಿದ ಮಾತುಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ. ಕಲಬೆರಕೆ ಸರ್ಕಾರ ಎಂಬ ಪ್ರಧಾನಿ ಹೇಳಿಕೆಯನ್ನು ಖಂಡಿಸಿದರು.

ನನ್ನ ಸರ್ಕಾರ ಲೂಟಿ ಸರ್ಕಾರವಲ್ಲ, ಬರಗಾಲ, ಕೊಡಗಿನ ನೆರೆಯಂಥ ಸಂದರ್ಭಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದು ತಮ್ಮ ಸರ್ಕಾರದ ಕಾಲಾವಧಿಯನ್ನು ಸಮರ್ಥನೆ ಮಾಡಿಕೊಂಡರು.

ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕರು, ಜಿಂದಾಲ್ ಭೂಮಿ ಮಾರಾಟದಲ್ಲಿ ಭ್ರಷ್ಟಚಾರ ನಡೆದಿದೆ, ಕೋಟಿಗಟ್ಟಲೇ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ ಇಂತಹ ಸರ್ಕಾರ ಬೇಡವೆಂಬ ಕಾರಣಕ್ಕಾಗಿ ನಾವು ರಾಜೀನಾಮೆ ನೀಡಿದ್ದೇವೆ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅಂತಹ ಆಪಾದನೆಗಳಿಗೆ ದೇಶದ ಜನರಿಗೆ, ನಾಡಿನ ಜನರಿಗೆ ಉತ್ತರ ಕೊಡಬೇಕಿದೆ. ಅನೇಕ ಸವಾಲುಗಳನ್ನು ಎದುರಿಸಿ ಸರ್ಕಾರ ನಡೆಸಿದ್ದೇನೆ. ಅವೆಲ್ಲ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿ ಜನರಲ್ಲಿ ಹೇಗೆ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕಿದೆ. ಜನರಿಗೆ ಸದನದ ಮೂಲಕವೇ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದರು.

.... ಮುಂದುವರೆಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT