ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ವಿರುದ್ಧ ಕಾರ್ಮಿಕರ ಪ್ರತಿಭಟನೆ

Last Updated 30 ಮೇ 2018, 19:36 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಇಲ್ಲಿನ ಕೈಗಾರಿಕಾ ವಲಯದ ’ಟಿಆರ್‌ಎಂಎನ್ ಕಂಪನಿ’ಯ ಆಡಳಿತ ಮಂಡಳಿ ವಿರುದ್ಧ, ಅಮಾನತುಗೊಂಡಿರುವ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಮಿಕರು ಸಿಐಟಿಯು ಸಂಘಟನೆ ಸ್ಥಾಪಿಸಲು ಮುಂದಾದಾಗ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಸಂಘರ್ಷ ಉಂಟಾಗಿದೆ. ಇದರ ಮಧ್ಯೆ ಆಡಳಿತ ಮಂಡಳಿ 24 ಕಾರ್ಮಿಕರು ಹಾಗೂ ಒಂದು ವರ್ಷ ತರಬೇತಿ ಪಡೆದ 19 ಮಂದಿಯನ್ನು ಅಮಾನತುಗೊಳಿಸಿದೆ. ಇದನ್ನು ವಿರೋಧಿಸಿ ಸುಮಾರು 189 ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಾಗಿ ಕಾರ್ಮಿಕರು ತಿಳಿಸಿದರು. 

‘ಕಂಪನಿಯ ನಿಯಮದಂತೆ ಒಂದು ವರ್ಷ ತರಬೇತಿ ಪಡೆದವರನ್ನು ಸಹಜವಾಗಿ ಹೊರಹಾಕುತ್ತೇವೆ. ಅವರನ್ನು ಅಮಾನತು ಮಾಡಿಲ್ಲ. ಇನ್ನು 24 ಮಂದಿಗೆ ಆಡಳಿತ ಮಂಡಳಿ ಮೂಲಕ ನೋಟಿಸ್ ನೀಡಿದ್ದು, ಕೆಲವರು ವಿಚಾರಣೆಗೆ ಬಂದು ಕೆಲಸಕ್ಕೆ ಮರಳಿದ್ದಾರೆ. ಉಳಿದವರಿಗೂ ಪತ್ರ ಬರೆಯುತ್ತೇವೆ. ಅವರು ನಿಯಮಗಳಂತೆ ಕಾರ್ಯ ನಿರ್ವಹಿಸಿದರೆ ಕೆಲಸಕ್ಕೆ ತೆಗೆದುಕೊ ಳ್ಳುತ್ತೇವೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಚಿದಾನಂದ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT