ಹಾಸನಾಂಬೆ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ: ಅನಿತಾ ಕುಮಾರಸ್ವಾಮಿ

7

ಹಾಸನಾಂಬೆ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ: ಅನಿತಾ ಕುಮಾರಸ್ವಾಮಿ

Published:
Updated:

ಹಾಸನ: ‘ಹಾಸನಾಂಬೆಯ ಆಶೀರ್ವಾದದಿಂದ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ’ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

ಹಾಸನಾಂಬೆಯ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ದೇವರ ಮೇಲೆ ಅತೀವ ನಂಬಿಕೆ ಇದೆ. ಆ ಕಾರಣಕ್ಕೆ ಪ್ರತಿವರ್ಷ ಇಲ್ಲಿಗೆ ಬರುತ್ತೇನೆ. ಕುಮಾರಸ್ವಾಮಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಕೊಟ್ಟು ಸಿಕ್ಕಿರುವ ಮುಖ್ಯಮಂತ್ರಿ ಸ್ಥಾನವನ್ನು ಉಳಿಸು ಎಂದು ಬೇಡಿಕೊಂಡಿದ್ದೇನೆ. ಹಾಗೆಯೇ ನಾಡಿನ ಜನರಿಗೆ ಸುಖ ಶಾಂತಿ ಸಿಗಲಿ. ರೈತರ ಸಂಕಷ್ಡ ಬಗೆಹರಿಸು ಎಂದು ಪ್ರಾರ್ಥಿಸಿದ್ದೇನೆ’ ಎಂದರು.

‘ರಾಮನಗರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಉಳಿದ ನಾಲ್ಕೂ ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಒಲಿಯುತ್ತದೆ ಎನ್ನುವ ವಿಶ್ವಾಸವಿದೆ. ಪುತ್ರ ನಿಖಿಲ್ ಚುನಾವಣಾ ರಾಜಕೀಯಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ನಾನೂ‌ ಕೂಡ ರಾಜಕೀಯಕ್ಕೆ ಬರುವೆ ಅಂದು ಕೊಂಡಿರಲಿಲ್ಲ’ ಎಂದು ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್‌ ತುಂಬಾ ಕ್ರೀಯಾಶೀಲವಾಗಿ‌ ಕೆಲಸ ಮಾಡಿದ್ದಾನೆ. ಹಾಗಾಗಿ ಅವನು ರಾಜಕೀಯಕ್ಕೆ ಬರಬೇಕೆಂಬ ಎಂಬ ಒತ್ತಾಯ ಇದೆ. ಅವನು‌ ಏನೇ‌ ಒಳ್ಳೆ ಕಾರ್ಯ ಮಾಡಿದ್ರೂ ನನ್ನ‌ ಆಶೀರ್ವಾದ ಇರುತ್ತೆ’ ಎಂದು ಹೇಳಿದರು.

‘ನಿಖಿಲ್ ಹಾಗೂ ಪ್ರಜ್ವಲ್ ಪೈಕಿ ಯಾರಿಗೆ ದೇವರ ಆಶೀರ್ವಾದ, ಜನರ ಬೆಂಬಲ ಯಾರಿಗೆ ಇರುತ್ತದೆಯೊ ಅವರು ಗೆಲ್ಲುತ್ತಾರೆ. ರೈತರಿಗೆ ಬ್ಯಾಂಕ್ ಕಿರುಕುಳ ಆಗುತ್ತಿರುವುದನ್ನು ಮುಖ್ಯಮಂತ್ರಿ ಸರಿಪಡಿಸುತ್ತಾರೆ’ ಎಂದು ಭರವಸೆ ಮಾತುಗಳನ್ನು ಆಡಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 3

  Frustrated
 • 2

  Angry

Comments:

0 comments

Write the first review for this !