ಸೋಮವಾರ, ಡಿಸೆಂಬರ್ 9, 2019
26 °C
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಟೀಕೆ

ಕುಮಾರಸ್ವಾಮಿ ಇನ್ನು ಜನ್ಮದಲ್ಲಿ ಮುಖ್ಯಮಂತ್ರಿಯಾಗಲ್ಲ: ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ಡಿ.9ರ ನಂತರ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಹಗಲುಗನಸು ಕಾಣುತ್ತಿದ್ದಾರೆ. ಆ ಆಸೆ ಇನ್ನು ಅವರ ಜನ್ಮದಲ್ಲಿ ಈಡೇರುವುದಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ರೋಡ್‌ ಶೋದಲ್ಲಿ ಮಾತನಾಡಿದ ಅವರು, ‘ವಾರದ ಹಿಂದೆ ದೇವೇಗೌಡರು ಯಡಿಯೂರಪ್ಪ ಅವರ ಸರ್ಕಾರ ಬೀಳಿಸುವುದಿಲ್ಲ ಎನ್ನುತ್ತಾರೆ. ಅದು ನಿನ್ನೆ ಮೊನ್ನೆಯಿಂದ ಬದಲಾಗಿ ಹೋಗಿದೆ. ಸಿದ್ದರಾಮಯ್ಯ ಅವರ ಜತೆ ಕೈಮಿಲಾಯಿಸುವುದು, ಮತ್ತೆ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಕಾಂಗ್ರೆಸ್, ಜೆಡಿಎಸ್‌ನವರು ಬೀದಿಯಲ್ಲಿ ವ್ಯಾಜ್ಯ ಮಾಡಿಕೊಂಡಿದ್ದು ಜನರೆಲ್ಲ ನೋಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಕನಸು ನನಸಾಗುವುದಿಲ್ಲ’ ಎಂದು ತಿಳಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಅಳಿಯ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದ ವೈದ್ಯಕೀಯ ಕಾಲೇಜನ್ನು ಸ್ನೇಹಿತರಿಗೆ ಉಡುಗೊರೆಯಾಗಿ ಕನಕಪುರಕ್ಕೆ ಕೊಟ್ಟರು. ವೈದ್ಯಕೀಯ ಕಾಲೇಜು ಕೇಳಿದ ನನಗೆ ಅದರಿಂದ ಏನೂ ಉಪಯೋಗವಿಲ್ಲ ಎಂದರು. ಈ ಅನ್ಯಾಯವನ್ನು ಪ್ರಶ್ನಿಸಿಯೇ ನಾವು ರಾಜೀನಾಮೆ ಕೊಟ್ಟೆವು. ಯಡಿಯೂರಪ್ಪ ಅವರು ಆ ಅನ್ಯಾಯ ಸರಿ ಮಾಡಲು ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಕೊಟ್ಟರು’ ಎಂದರು.

‘ಜಿಲ್ಲೆಯ ಅಳಿಯ ಎಂದು ಹೇಳುವವರು ಇವತ್ತು ಒಕ್ಕಲಿಗ ಸಮುದಾಯದ ಹೆಸರು ಮುಂದು ಮಾಡುತ್ತಿರುವವರಿಗೆ, ಸಮುದಾಯದ ಬಗ್ಗೆ ಅಷ್ಟೊಂದು ಪ್ರೀತಿ ಇದ್ದಿದ್ದರೆ 2009ರಲ್ಲಿ ಬಚ್ಚೇಗೌಡರ ವಿರುದ್ಧ ಸ್ಪರ್ಧಿಸುವ ಔಚಿತ್ಯ ಏನಿತ್ತು? ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಒಕ್ಕಲಿಗರು ದಡ್ಡರಲ್ಲ. ಸಮುದಾಯದ ಮತ ತರುವ ವ್ಯರ್ಥ ಪ್ರಯತ್ನ ಮಾಡಲು ಹೋಗಬೇಡಿ. ನಿಮ್ಮ ನಿಜವಾದ ಬಣ್ಣ ಇಡೀ ರಾಜ್ಯದ ಜನರಿಗೆ ಗೊತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು