ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ–ಜಾರಕಿಹೊಳಿ ಚರ್ಚೆ

Last Updated 12 ಡಿಸೆಂಬರ್ 2018, 20:26 IST
ಅಕ್ಷರ ಗಾತ್ರ

ಬೆಳಗಾವಿ: ಕಾಂಗ್ರೆಸ್‌ನ ಪ್ರಭಾವಿ ನಾಯಕರ ಜತೆಗೆ ಮುನಿಸಿಕೊಂಡು ಸಂಪುಟ ಸಭೆಗಳಿಂದ ದೂರ ಉಳಿದಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಗೆ ವಿಧಾನಸಭೆಯಲ್ಲಿ ಬುಧವಾರ 5 ನಿಮಿಷ ಚರ್ಚೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಯಿತು.

ಮಧ್ಯಾಹ್ನ ನಂತರ ಕುಮಾರಸ್ವಾಮಿ ಕಲಾಪಕ್ಕೆ ಬಂದಾಗ ರಮೇಶ ಅವರು ನಗುತ್ತಲೇ ಹತ್ತಿರ ಹೋಗಿ ಮಾತುಕತೆ ನಡೆಸಿದರು. ಶಾಸಕರೊಬ್ಬರ ಜತೆಗೆ ಮಾತುಕತೆಯಲ್ಲಿ ತೊಡಗಿದ್ದ ಸಚಿವ ಎಚ್‌.ಡಿ.ರೇವಣ್ಣ ಅವರೂ ಅಲ್ಲಿಗೆ ಧಾವಿಸಿದರು. ಆಗ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪಿಂಚಣಿ ಯೋಜನೆಯ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಇದರಿಂದಾಗಿ ಮಾತುಕತೆಗೆ ಬ್ರೇಕ್‌ ಬಿತ್ತು. ಬಳಿಕ ರಮೇಶ ಅವರು ಶಾಸಕರಾದ ಎಂ.ಟಿ.ಬಿ.ನಾಗರಾಜ್‌, ಬಿ.ನಾಗೇಂದ್ರ ಜತೆಗೆ ಸುಮಾರು ಹೊತ್ತು ಚರ್ಚಿಸಿದರು.

ಡಾ.ಸುಧಾಕರ್‌ ಅನಾರೋಗ್ಯ: ಚಿಕ್ಕಬಳ್ಳಾಪುರದ ಶಾಸಕ ಕೆ.ಸುಧಾಕರ್ ಅವರು ಅನಾರೋಗ್ಯ ಪೀಡಿತರಾಗಿದ್ದು, 21ರ ವರೆಗೆ ಸದನಕ್ಕೆ ಗೈರುಹಾಜರಾಗಲು ಅನುಮತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT