ಕುಂದಗೋಳ ಉಪ ಚುನಾವಣೆ: ಅಂಚಟಗೇರಿಯಲ್ಲಿ ಉತ್ಸಾಹದ ಮತದಾನ

ಮಂಗಳವಾರ, ಜೂನ್ 18, 2019
29 °C

ಕುಂದಗೋಳ ಉಪ ಚುನಾವಣೆ: ಅಂಚಟಗೇರಿಯಲ್ಲಿ ಉತ್ಸಾಹದ ಮತದಾನ

Published:
Updated:

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಅಂಚಟೇರಿ ಗ್ರಾಮದಲ್ಲಿ ಉಪಚುನಾವಣೆಯ ಕಾವು ಜೋರಿದ್ದು, ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳಲುತ್ತಿದ್ದಾರೆ. 

ಬೆಳಗ್ಗಿನ ಬಿಸಿಲು ಏರುತ್ತಿದ್ದಾ ಹಾಗೆ ಕುಟುಂಬ ಸಮೀತ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.

ಬೆಳಿಗ್ಗೆನ 9:30ರ ಸುಮಾರಿಗೆ ಮತಗಟ್ಟೆ ಸಂಖ್ಯೆ 7ರ 1126 ಮತದಾರ ಪೈಕಿ 236 ಮತದಾರರು, ಮತಗಟ್ಟೆ ಸಂಖ್ಯೆ 8ರ 434 ಮತದಾರಲ್ಲಿ 106, ಮತಗಟ್ಟೆ ಸಂಖ್ಯೆ 9ರ 796 ಮತದಾರಲ್ಲಿ 134, ಹಾಗೂ ಮತಗಟ್ಟೆ ಸಂಖ್ಯೆ 10ರ 779 ಮತದಾರರಲ್ಲಿ 137 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ‌.

ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಐ. ಚಿಕ್ಕನಗೌಡ ಅದರಗುಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 65ರಲ್ಲಿ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ಅವರು, ಈ ಬಾರಿ ಕುಂದಗೋಳದಲ್ಲಿ ಬಿಜೆಪಿ ಪರ ಅಲೆಯಿದೆ. ಕಳೆದ ಬಾರಿ ನಾನು 634 ಮತಗಳಿಂದ ಸೋತಿದ್ದೆ. ಈ ಬಾರಿ 21 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಗೆಲುವು ನನ್ನದೇ ಎಂದು ಹೇಳಿದರು.


ಕುಂದಗೋಳ ವಿಧಾನಸಭಾ ಕ್ಷೇತ್ರದ ಅದರಗುಂಚಿಯಲ್ಲಿ 101 ವರ್ಷದ ದೊಡ್ಡೇಶಪ್ಪ ಪೂಜಾರ ವೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಇದುವರೆಗೆ ಒಮ್ಮೆಯೂ ಮತದಾನ ತಪ್ಪಿಸಿಲ್ಲ ಎಂದು‌ ಹೆಮ್ಮೆ ವ್ಯಕ್ತಪಡಿಸಿದ ಪೂಜಾರ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !