ಮಂಗಳವಾರ, ಫೆಬ್ರವರಿ 18, 2020
17 °C
ಲಸಿಕೆ, ರಾಸಾಯನಿಕ ಖರೀದಿಗೆ ₹4.14 ಕೋಟಿ ಅಗತ್ಯ

ಮಂಗನಕಾಯಿಲೆ ಲ್ಯಾಬ್‌ಗೆ ಅನುದಾನದ ಕೊರತೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಂಗನ ಕಾಯಿಲೆ ಪ್ರಕರಣಗಳ ಪರೀಕ್ಷೆಗೆ ಸ್ಥಾಪಿತವಾದ ರಾಜ್ಯದ ಏಕೈಕ ‘ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರ’ ಅನುದಾನದ ಕೊರತೆಯಿಂದ ಬಳಲುತ್ತಿದೆ.

1956ರಲ್ಲಿ ಮೊದಲ ಬಾರಿ ಸೊರಬ ತಾಲ್ಲೂಕು ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಈ ಕಾಯಿಲೆಗೆ ಕೆಎಫ್‌ಡಿ ಎಂದೇ ಹೆಸರಿಡಲಾಗಿದೆ. 1990ರಿಂದ ಆರೋಗ್ಯ ಇಲಾಖೆ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಲು ಆರಂಭಿಸಿತು. ಇಲ್ಲಿಯವರೆಗೂ 800ಕ್ಕೂ ಹೆಚ್ಚು ಜನರ ಸಾವಿಗೆ ಈ ರೋಗ ಕಾರಣವಾಗಿದೆ. 2019ರಲ್ಲೇ 18 ಜನರು ಮೃತಪಟ್ಟಿದ್ದಾರೆ. ಕಾಯಿಲೆ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಲು ಮಲೆನಾಡು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪತ್ತೆಯಾಗುವ ಪ್ರಕರಣಗಳ ಪ್ರಯೋಗ ನಡೆಸಲು ದಶಕಗಳ ಹಿಂದೆಯೇ ಸಂಶೋಧನಾ ಕೇಂದ್ರ ಆರಂಭಿಸಲಾಗಿತ್ತು. ಮೂರು ವರ್ಷಗಳಿಂದ ಈಚೆಗೆ ಆಧುನೀಕರಣಗೊಳಿಸಲಾಗಿದೆ.

ರೋಗ ಹರಡುವಿಕೆ ತಡೆಯಲು ಚುಚ್ಚುಮದ್ದು ನೀಡುವುದು, ಡಿಎಂಪಿ ತೈಲ ವಿತರಣೆ, ಇಲಿಗಳ ಮೇಲೆ ಚುಚ್ಚುಮದ್ದಿನ ಪ್ರಯೋಗ, ಉಣುಗುಗಳ ಪರೀಕ್ಷೆ ಮತ್ತಿತರ ಚಟುವಟಿಕೆಯನ್ನು ಈ ಕೇಂದ್ರ ನಿರ್ವಹಿಸುತ್ತಿದೆ. ಕಚೇರಿಯ ನಿರ್ವಹಣೆ, ವಿದ್ಯುತ್ ಬಿಲ್‌ ಪಾವತಿ, ಡಿಎಂಪಿ ತೈಲ ಖರೀದಿ, ಗುತ್ತಿಗೆ ನೌಕರರ ವೇತನ, ಪ್ರಯೋಗಕ್ಕೆ ವಿಶೇಷ ಇಲಿ, ರಾಸಾಯನಿಕ ಖರೀದಿ, ಲಸಿಕೆಗಳಿಗೆ ವಾರ್ಷಿಕ ಸರಾಸರಿ ₹4.14 ಕೋಟಿ ಅನುದಾನದ ಅವಶ್ಯಕತೆ ಇದೆ. ಬಿಡುಗಡೆಯಾಗಿರುವುದು ₹12.99 ಲಕ್ಷ ಮಾತ್ರ.

ವಿದ್ಯುತ್ ಸಂಪರ್ಕ ಕಡಿತ: ಆಧುನಿಕ ಯಂತ್ರೋಪಕರಣ ಹೊಂದಿರುವ ಪ್ರಯೋಗಾ
ಲಯಕ್ಕೆ ನಿರಂತರ ವಿದ್ಯುತ್ ಸಂಪರ್ಕದ ಆವಶ್ಯಕತೆ ಇದೆ. ಅನುದಾನ ಕೊರತೆಯ ಕಾರಣ ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗಿಲ್ಲ. ಹಾಗಾಗಿ, ಹಲವು ಬಾರಿ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ನವೆಂಬರ್‌ನಿಂದ ಇಲ್ಲಿಯವರೆಗೆ ₹1.27 ಲಕ್ಷ ಬಾಕಿ ಉಳಿಸಿಕೊಳ್ಳಲಾಗಿದೆ.

ರೋಗ ನಿಯಂತ್ರಣಕ್ಕೆ ಕ್ರಮ: ರೋಗ ನಿಯಂತ್ರಣಕ್ಕೆ ಈ ವರ್ಷ 2.20 ಲಕ್ಷ ಡೋಸ್ ಲಸಿಕೆ ನೀಡ
ಲಾಗಿದೆ. ಈಗಾಗಲೇ ಜನರಿಗೆ 1.60 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ.  ಉಳಿದ 60 ಸಾವಿರ ಡೋಸ್‌ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ.  ಜಿಲ್ಲೆಯಲ್ಲಿ 45 ಸಾವಿರ ಡಿಎಂಪಿ ತೈಲ ದಾಸ್ತಾನು ಲಭ್ಯವಿದೆ. ಈಗಾಗಲೇ 30 ಸಾವಿರ ಡಿಎಂಪಿ ತೈಲವನ್ನು ಅರಣ್ಯ ವ್ಯಾಪ್ತಿಯ ಗ್ರಾಮಗಳಿಗೆ ನೀಡಲಾಗಿದೆ. 50 ಮೀಟರ್ ವ್ಯಾಪ್ತಿ
ಯಲ್ಲಿ ಮೆಲಾಥಿಯಾನ್ ಸಿಂಪಡಣೆ ಮಾಡಲಾಗಿದೆ. ಕಾಯಿಲೆಯಿರು ಶಂಕಿತ 467 ಪ್ರಕರಣಗಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಕ್ಕೆ ಒಳಪಡಿಸಲಾಗಿದೆ.

ಮಂಗನಕಾಯಿಲೆ ಪತ್ತೆಗೆ ಪ್ರಯೋಗಾಲಯ

 

ಬೆಂಗಳೂರು: ಮಂಗನಕಾಯಿಲೆ ಪತ್ತೆಗೆ ಶಿವಮೊಗ್ಗದಲ್ಲಿ ಪ್ರಯೋಗಾಲಯ ಆರಂಭಿಸಲು ಸಿದ್ಧತೆಗಳು ನಡೆದಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಶುಕ್ರವಾರ ತಿಳಿಸಿದರು.

ಪ್ರಯೋಗಾಲಯ ಆರಂಭಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು. ಪ್ರಯೋಗಾಲಯದ ರೂಪು ರೇಷೆಗಳ ಬಗ್ಗೆ ತಜ್ಞರಿಂದಲೂ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಅದರ ಆಧಾರದ ಮೇಲೆ ಇದನ್ನು ಸ್ಥಾಪಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಿಯಂತ್ರಣದಲ್ಲಿದೆ: ಮಂಗನ ಕಾಯಿಲೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ನಿಯಂತ್ರಣದಲ್ಲಿ ಇದ್ದು, ಅಗತ್ಯ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ. ರೋಗ ಹೆಚ್ಚು ವ್ಯಾಪಿಸದಂತೆ ನೋಡಿಕೊಳ್ಳಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

 *******

ಅನುದಾನ ಬಾಕಿ ಇದ್ದರೂ ಮಂಗನ ಕಾಯಿಲೆ ಪ್ರಯೋಗ ಕಾರ್ಯಗಳಿಗೆ ಹಿನ್ನಡೆಯಾಗಿಲ್ಲ. ಸರ್ಕಾರ ನೆರವು ನೀಡುತ್ತಿದೆ.

-ಡಾ.ಕಿರಣ್, ಉಪ ನಿರ್ದೇಶಕ, ಸಂಶೋಧನಾ ಕೇಂದ್ರ, ಶಿವಮೊಗ್ಗ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು