ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಎಂ.ಹೆಗಡೆಗೆ ಲಲಿತಕಲಾ ಅಕಾಡೆಮಿ ಗೌರವ

Last Updated 26 ಫೆಬ್ರುವರಿ 2020, 15:13 IST
ಅಕ್ಷರ ಗಾತ್ರ

ಶಿರಸಿ: ಚಿತ್ರಕಲೆಯ ವಿಭಿನ್ನ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಇಲ್ಲಿನ ಚಿತ್ರಕಲಾಕಾರ ಜಿ.ಎಂ.ಹೆಗಡೆ ತಾರಗೋಡ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಾಥಮಿಕ ಶಾಲಾ ಹಂತದಿಂದಲೇ ನಾಟಕ, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ಪ್ರೌಢಶಾಲಾ ಹಂತದಲ್ಲಿ ಕಲಾಭ್ಯಾಸದಲ್ಲಿ ತೊಡಗಿಕೊಂಡರು. ನಂತರ ಗದಗದ ಕಲಾವಿದರಾದ ಎಂ.ಎ.ಚೆಟ್ಟಿ ಹಾಗೂ ಟಿ.ಪಿ.ಅಕ್ಕಿ ಗರಡಿಯಲ್ಲಿ ಬೆಳೆದರು. 1970ರಲ್ಲಿ ಅಂತರರಾಷ್ಟ್ರೀಯ ಕಲಾವಿದ ಎಂ.ಟಿ.ವಿ.ಆಚಾರ್ಯರ ಮಾರ್ಗದರ್ಶನ ಜಿ.ಎಂ.ಹೆಗಡೆ ಅವರ ಕಲಾ ಬೆಳವಣಿಗೆಗೆ ಪೂರಕವಾಯಿತು.

1982ರಲ್ಲಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ಏಕವ್ಯಕ್ತಿ ಕಲಾ ಪ್ರದರ್ಶನ ನೀಡಿದ್ದರು. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅವರು ಬಿಡಿಸಿದ ಚಿತ್ರಗಳು ಪ್ರಕಟಗೊಂಡಿವೆ. ಜಲವರ್ಣದಲ್ಲಿ ಅವರು ಚಿತ್ರಿಸಿದ ವಿಶ್ವಾಮಿತ್ರ ಮೇನಕೆ, ಶಬರಾರ್ಜುನ, ದುಷ್ಯಂತ- ಶಾಕುಂತಲೆ, ರುಕ್ಮಾಂಗದ, ಮೋಹಿನಿಯಂತಹ ಪೌರಾಣಿಕ ಚಿತ್ರಗಳು ಜನಪ್ರಿಯವಾಗಿವೆ.

ಅಂಚೆ ಕಲಾಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ, ಉಡುಪಿಯ ಆರ್ಟ್ಸ್ ಫೋರಮ್ ಆಜೀವ ಸದಸ್ಯರಾಗಿ, ಉತ್ತರ ಕನ್ನಡ ಜಿಲ್ಲೆ ಚಿತ್ರಕಲಾ ಪರಿಷತ್ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಕಲಾ ಸಾಧನೆಗೆ ಎಂ.ಟಿ.ವಿ. ಆಚಾರ್ಯ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ, ಪಿ.ಲಂಕೇಶ ಪ್ರಶಸ್ತಿ, ರಾಷ್ಟ್ರಭೂಷಣ ಪ್ರಶಸ್ತಿ, ಡಾ.ರಾಜಕುಮಾರ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಉತ್ತಮ ಕಲಾ ಶಿಕ್ಷಕ ಪ್ರಶಸ್ತಿ, ಅಖಿಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT