ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಜೈವಿಕ ಮಾದರಿ ಇಲ್ಲ: ಅಪೋಲೋ ಆಸ್ಪತ್ರೆ ಹೇಳಿಕೆ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ : ‘ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ಗೆ ಅಪೋಲೋ ಆಸ್ಪತ್ರೆ ಗುರುವಾರ ತಿಳಿಸಿದೆ.

ಜಯಲಲಿತಾ ಅವರ ಮಗಳು ಎಂದು ಹೇಳಿಕೊಳ್ಳುತ್ತಿರುವ ಬೆಂಗಳೂರಿನ ಎಸ್. ಅಮೃತಾ ಎನ್ನುವವರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಆಸ್ಪತ್ರೆ ಈ ಹೇಳಿಕೆ ನೀಡಿದೆ. ತಾವು ಜಯಾ ಅವರ ಮಗಳಾಗಿರುವ ಬಗ್ಗೆ ಡಿಎನ್‌ಎ ಪರೀಕ್ಷೆಯನ್ನು ನಡೆಸಲು ಆಸ್ಪತ್ರೆಗೆ ಆದೇಶಿಸಬೇಕು ಎಂದು ಅವರು ಕೋರಿದ್ದರು.

ಈ ಬಗ್ಗೆ ತಕರಾರು ಸಲ್ಲಿಸಿದ ಜಯಲಲಿತಾ ಅವರ ಸಂಬಂಧಿಕರಾದ ದೀಪಕ್‌ ಮತ್ತು ದೀಪಾ, ‘ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅಮೃತಾ ಯಾವುದೇ ಸೂಕ್ತ ದಾಖಲೆಗಳನ್ನು ನೀಡಿಲ್ಲ. ಆದ್ದರಿಂದ ಅವರು ಸಿವಿಲ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅಲ್ಲಿ ದಾಖಲೆ ಸಲ್ಲಿಸಲು ಆದೇಶಿಸಿ ಎಂದು ಕೋರ್ಟ್‌ನಲ್ಲಿ ಪ್ರತಿವಾದಿಸಿದ್ದರು.

ಅಮೃತಾ ಅವರ ಕೋರಿಕೆಯ ಬಗ್ಗೆ ಹೇಳಿಕೆ ನೀಡಿರುವ ಆಸ್ಪತ್ರೆ, ಅವರ ಕೋರಿಕೆ ಈಡೇರಿಸಲು ತನ್ನ ಬಳಿ ಮಾದರಿಗಳು ಇಲ್ಲ ಎಂದಿದೆ.

ಅನಾರೋಗ್ಯಕ್ಕೀಡಾಗಿದ್ದ  ಜಯಲಲಿತಾ 2016ರ ಸೆಪ್ಟೆಂಬರ್‌ 22ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಅವರು ಸ್ಪಂದಿಸದ ಕಾರಣ, ಅದೇ ಡಿಸೆಂಬರ್‌ 5ರಂದು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT