ಶುಕ್ರವಾರ, ಫೆಬ್ರವರಿ 26, 2021
20 °C
ಎತ್ತಿನಹೊಳೆ ತಿರುವು ಯೋಜನೆಗೆ ಭೂಮಿ ಅಗೆದದ್ದು ಕಾರಣ?

ಭೂಕುಸಿತ; ಭತ್ತದ ಗದ್ದೆಗೆ ಮಣ್ಣು

ಜಾನೇಕೆರೆ ಆರ್‌.ಪರಮೇಶ್‌ Updated:

ಅಕ್ಷರ ಗಾತ್ರ : | |

Deccan Herald

ಸಕಲೇಶಪುರ: ಅತಿವೃಷ್ಟಿಯಿಂದ ತಾಲ್ಲೂಕಿನ ಹಲವಡೆ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಆದರೆ ಆಲುವಳ್ಳಿ, ಕಡಗರವಳ್ಳಿ, ನೂದರಳ್ಳಿ ಭಾಗದಲ್ಲಿ ಎತ್ತಿನಹೊಳೆ ಯೋಜನೆಗೆ ಭೂಮಿ ಅಗೆದದ್ದು ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಇಂಥದೊಂದು ಶಂಕೆ ಈ ಭಾಗದ ರೈತರಲ್ಲಿ ಮೂಡಿದೆ. ಎತ್ತಿನಹೊಳೆ ತಿರುವು ಯೋಜನೆಗೆ ಭಾರೀ ಆಳಕ್ಕೆ ಭೂಮಿ ಅಗೆಯಲಾಗಿದೆ. ಇಲ್ಲಿಯೇ ಭೂಮಿ ಕುಸಿದಿದ್ದು ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಮಣ್ಣು ಆವರಿಸಿದೆ.

ಈ ಗ್ರಾಮಗಳ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆ ಅಣೆಕಟ್ಟು ನಿರ್ಮಾಣ, ಪೈಪ್‍ಲೈನ್‍ ಅಳವಡಿಸಲು ಭಾರೀ ಆಳ, ಅಗಲಕ್ಕೆ ಭೂಮಿ ಬಗೆಯಲಾಗಿದೆ. ಅಲ್ಲಲ್ಲಿ ಈಗಾಗಲೇ ಬೃಹತ್‌ ಪೈಪುಗಳನ್ನು ಅಳವಡಿಸಲಾಗಿದೆ. ಭೂಮಿ ಅಗೆದಿದ್ದರಿಂದ ಮಣ್ಣು ಸಡಿಲವಾಗಿದೆ. ಇದರಿಂದಲೇ ಹಲವೆಡೆ ಭೂಮಿ ಕುಸಿದಿದೆ ಎನ್ನಲಾಗಿದೆ.

ಆಲುವಳ್ಳಿ ಬಳಿ ಕಾಂಕ್ರೀಟ್‌ ರಸ್ತೆಯೇ ಇಬ್ಭಾಗವಾಗಿದ್ದರೆ; ಸಮೀಪದಲ್ಲಿ 5 ಎಕರೆ ಪ್ರದೇಶದ ಕಾಫಿ ತೋಟ ತಗ್ಗು ಪ್ರದೇಶಕ್ಕೆ ಕುಸಿದಿದೆ. ಗದ್ದೆ, ತೋಟಕ್ಕೆ ಹೋಗುವ ಹಾದಿಯೇ ಕುಸಿದಿದೆ ಎನ್ನುತ್ತಾರೆ ರೈತ ಧರ್ಮೆಗೌಡ.

ಮೋಗಾನಹಳ್ಳಿಯಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ಭತ್ತದ ಗದ್ದೆ, ಅಡಿಕೆ ತೋಟದಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು