ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮರಹಿತ ರಾಜಕೀಯ ಕುರುಡು

Last Updated 1 ಫೆಬ್ರುವರಿ 2018, 9:26 IST
ಅಕ್ಷರ ಗಾತ್ರ

ಹಾವೇರಿ: ‘ಧರ್ಮ ಮತ್ತು ರಾಜಕೀಯವು ಜನರನ್ನು ಒಗ್ಗೂಡಿಸುವ ಅಂಶಗಳಾಗಿದ್ದು. ಧರ್ಮ ಜೀವನವನ್ನು ಮುನ್ನಡೆಸಿದರೆ, ರಾಜಕೀಯದಲ್ಲಿ ಧರ್ಮ ಇಲ್ಲದಿದ್ದರೆ ಕುರುಡು ಸಮಾಜ ಸೃಷ್ಟಿಯಾಗುತ್ತದೆ ಎಂದು ಶ್ರೀ ಶಿವಲಿಂಗೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಪುಷ್ಪಾ ಶಲವಡಿಮಠ ಹೇಳಿದರು.

ನಗರದ ರಾಚೋಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಿ.ಜಿ.ತೋಟಣ್ಣನವರ, ಅಜ್ಜಪ್ಪ ಹೂಗಾರ, ಬಿ.ಎಸ್.ಸಾವಿರಮಠ ಮತ್ತು ಸಿ.ಎಂ.ಪಟ್ಟಣಶೆಟ್ಟರ ದತ್ತಿನಿಧಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತೀಯ ಸಮಾಜವು ಧರ್ಮದ ತಳಹದಿಯ ಮೇಲೆ ನಿಂತಿದ್ದು, ಪ್ರಾಚೀನ ಕಾಲದಿಂದಲೂ ರಾಜಾಶ್ರಯಗಳು ಧರ್ಮವನ್ನು ಘೋಷಿಸಿವೆ. ಧರ್ಮ ಮತ್ತು ಸಾಹಿತ್ಯದಲ್ಲಿ ಅದರ ಪ್ರಭಾವವನ್ನು ಕಾಣಬಹುದು ಎಂದರು.

ಸಾಹಿತಿ ಸಿ.ಸಿ.ಪ್ರಭುಗೌಡರ ಮಾತನಾಡಿ, ‘ಮನುಷ್ಯ ಬದುಕಿನ ಪ್ರತಿಕ್ಷಣದಲ್ಲಿಯೂ ಕಾದಾಡುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ಜನರ ಭಾವನೆಗೆ ಸ್ಪಂದಿಸುವ ಸಮಾಜಮುಖಿ ವ್ಯಕ್ತಿಗಳು ಮತ್ತು ಸಾಹಿತ್ಯ ಅಮರವಾಗುತ್ತವೆ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಮಾತನಾಡಿ. ‘ಹಾವೇರಿ ತಾಲ್ಲೂಕು ಘಟಕವು ಜಿಲ್ಲೆಯಲ್ಲಿಯೇ ಅತಿಹೆಚ್ಚು 35 ದತ್ತಿನಿಧಿ ಹೊಂದಿದ ಕಸಾಪ ಘಟಕವಾಗಿದೆ’ ಎಂದು ಹೇಳಿದರು.

ದತ್ತಿದಾನಿಗಳಾದ ಜಯದೇವಯ್ಯ ಸಾವಿರಮಠ, ಸಿ.ಜಿ.ತೋಟಣ್ಣನವರ, ಗಣೇಶಪ್ಪ ಹೂಗಾರ, ಪ್ರಾಚಾರ್ಯ ಸಿ.ವಿ.ಹಿರೇಮಠ, ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ, ಸಾಹಿತಿ ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೋರಗಲ್‌, ಪ್ರಥ್ವಿರಾಜ ಬೇಟಗೇರಿ, ವಿ.ಪಿ. ದ್ಯಾಮನ್ನನವರ, ಎಸ್.ಆರ್. ಹಿರೇಮಠ, ಎ.ಬಿ. ಗುಡ್ಡಳ್ಳಿ, ಎನ್.ಬಿ. ಕಾಳೆ, ಸುರೇಶ ಕಲ್ಮಣಿ, ರುದ್ರಪ್ಪ ಜಾಬಿನ್ ಹಾಗೂ ಸಂತೋಷ ಬಿದರಗಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT