ಬುಧವಾರ, ನವೆಂಬರ್ 13, 2019
28 °C

ಉಸ್ತುವಾರಿ ಹಂಚಿಕೆಗೆ ಗುಜರಾತ್ ಮಾದರಿ: ಲಕ್ಷ್ಮಣ ಸವದಿ

Published:
Updated:

ಬಳ್ಳಾರಿ: 'ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಜರಾತ್ ಮಾದರಿಯನ್ನು ಅನುಸರಿಸಿದ್ದಾರೆ' ಎಂದು ಉಸ್ತುವಾರಿ ಸಚಿವ ‌ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಧಾನಿ ಮೋದಿ, ಅಮಿತ್ ಶಾ ಗುಜರಾತ್‌ನಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡದೇ ಬೇರೆಯವರಿಗೆ ಅವಕಾಶ ನೀಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದರು. ಈಗ ಕರ್ನಾಟಕ ರಾಜ್ಯದಲ್ಲಿ ಸಹ ಇದೇ ಪ್ರಯೋಗವನ್ನು ಯಡಿಯೂರಪ್ಪ ಅನುಸರಿಸಿದ್ದಾರೆ' ಎಂದರು. 

LIVE: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

'ಶಾಸಕನಾಗದೇ ಇದ್ದರೂ ಕರೆದು ಸಚಿವ ಸ್ಥಾನ ನೀಡಿ, ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ಅನಿರೀಕ್ಷಿತ' ಎಂದರು.

'ಬಳ್ಳಾರಿ ಉಸ್ತುವಾರಿ ನನಗೆ ಸಿಕ್ಕಿದಕ್ಕೆ ಶ್ರೀರಾಮುಲು ಅವರೂ ಸಂತಸ ವ್ಯಕ್ತಪಡಿಸಿದ್ದಾರೆ. ರಾಮುಲು ಮತ್ತು ನಾನು ಸಹೋದರರಿದ್ದಂತೆ' ಎಂದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ: ಹೆಸರಷ್ಟೇ ಸಾಕೆ?

ಪ್ರತಿಕ್ರಿಯಿಸಿ (+)