ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಸಿಎಚ್‌ನಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ

Last Updated 17 ಜನವರಿ 2019, 17:21 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ ನಿರ್ಮಿತ ಲಘು ಸಮರ ಹೆಲಿಕಾಪ್ಟರ್‌ (ಎಲ್‌ಸಿಎಚ್‌) ಆಗಸದಿಂದ ಕ್ಷಿಪಣಿಯನ್ನು ಹಾರಿಸಬಲ್ಲ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಹೆಲಿಕಾಪ್ಟರ್‌ನ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಎಚ್‌ಎಎಲ್‌ ಮಾಡಿದೆ. ಆಗಸದಿಂದಲೇ ವೈಮಾನಿಕ ಗುರಿಯನ್ನು ಕ್ಷಿಪಣಿ ಮೂಲಕ ಧ್ವಂಸಗೊಳಿಸಬಹುದಾದ ಈ ಪರೀಕ್ಷೆ ಎಲ್‌ಸಿಎಚ್‌ ಪಾಲಿಗೆ ಮೈಲಿಗಲ್ಲು ಎನಿಸಿದೆ.

ಒಡಿಶಾದ ಚಾಂಡಿಪುರ್‌ನಲ್ಲಿ ಇತ್ತೀಚೆಗೆ ಪರೀಕ್ಷೆ ನಡೆಸಲಾಯಿತು. ವಿಂಗ್‌ ಕಮಾಂಡರ್‌ ಸುಭಾಷ್‌ ಪಿ ಜಾನ್‌ ಅವರ ನೇತೃತ್ವದಲ್ಲಿ ಕ್ಷಿಪಣಿ ಹಾರಿಸಿವೈಮಾನಿಕ ಗುರಿಯನ್ನು ಧ್ವಂಸಗೊಳಿಸಲಾಯಿತು.

ದೇಶದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್‌ ಮೂಲಕ ಆಗಸದಲ್ಲಿ ಕ್ಷಿಪಣಿ ಹಾರಿಸಿ ಪರೀಕ್ಷೆ ನಡೆಸಿದ್ದು, ಸೇನೆಯಲ್ಲಿರುವ ಯಾವುದೇ ಹೆಲಿಕಾಪ್ಟರ್‌ ಈವರೆಗೆ ಇಂತಹ ಸಾಮರ್ಥ್ಯ ಪ್ರದರ್ಶಿಸಿಲ್ಲ. ಈ ಮೂಲಕ ಎಲ್‌ಸಿಎಚ್‌ ಯಶಸ್ವಿಯಾಗಿ ಎಲ್ಲ ಬಗೆಯ ಕ್ಷಿಪಣಿಗಳನ್ನು ಅಳವಡಿಸಿ ಪರೀಕ್ಷೆ ಮಾಡಲಾಗಿದ್ದು, ಸೇವೆಗೆ ಬಳಸಲು ಸಿದ್ಧವಾಗಿದೆ ಎಂದು ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ತಿಳಿಸಿದರು.

ಈ ಹೆಲಿಕಾಪ್ಟರ್‌ 20 ಎಂಎಂ ಟರೆಂಟ್‌ ಗನ್ ಮತ್ತು 70 ಎಂಎಂ ರಾಕೆಟ್‌ಗಳನ್ನು ಸಿಡಿಸುವ ವ್ಯವಸ್ಥೆಯನ್ನು ಹೊಂದಿದೆ. ಇವುಗಳ ಪರೀಕ್ಷೆ ಕಳೆದ ವರ್ಷ ನಡೆದಿತ್ತು. ಈ ಹೆಲಿಕಾಪ್ಟರ್‌ನ ಮತ್ತೊಂದು ವಿಶೇಷತೆ ಎಂದರೆ, ಸಿಯಾಚಿನ್‌ನಂತಹ ಅತಿ ಎತ್ತರ ನೀರ್ಗಲ್ಲು ಪ್ರದೇಶದಲ್ಲೂ ಸಮರ್ಥವಾಗಿ ಆಕ್ರಮಣ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT