ಸದನದಲ್ಲಿ ಕಡತಕ್ಕೆ ಸಹಿ ಬೇಡ: ಸ್ಪೀಕರ್‌ ಸೂಚನೆ

7

ಸದನದಲ್ಲಿ ಕಡತಕ್ಕೆ ಸಹಿ ಬೇಡ: ಸ್ಪೀಕರ್‌ ಸೂಚನೆ

Published:
Updated:

ಬೆಂಗಳೂರು: ‘ಕಲಾಪ ನಡೆಯುವ ವೇಳೆಯಲ್ಲಿ ಶಾಸಕರು ಮುಖ್ಯಮಂತ್ರಿ ಅವರನ್ನು ಸುತ್ತುವರಿದು ಕಡತಗಳನ್ನು ನೀಡಿ ಮುಜುಗರ ಉಂಟು ಮಾಡಬಾರದು’ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಸೂಚನೆ ನೀಡಿದರು.

ವಿಧಾನಸಭಾ ಅಧಿವೇಶನದಲ್ಲಿ ಸೋಮವಾರ ಮಾತನಾಡಿದ ಅವರು, ‘40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ನೈತಿಕತೆ ಕಾಪಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಅನೇಕ ಸಚಿವರು ಮುಜುಗರ ತಂದಿಟ್ಟಿದ್ದಾರೆ. ಮುಂದೆ ಇಂತಹ ವಿದ್ಯಮಾನಗಳು ನಡೆಯಬಾರದು. ಶಾಸಕರು ಮುಖ್ಯಮಂತ್ರಿ ಸುತ್ತ ನಿಂತು ಚರ್ಚೆ ನಡೆಸಬಾರದು. ಮುಖ್ಯಮಂತ್ರಿ ಕಚೇರಿಗೆ ತೆರಳಿ ಜರೂರು ಕೆಲಸಗಳನ್ನು ಮಾಡಿಕೊಂಡು ಬರಬೇಕು’ ಎಂದು ಅವರು ಸೂಚಿಸಿದರು.

‘ಕಲಾಪ ಮಂಗಳವಾರದಿಂದ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ’ ಎಂದು ಅವರು ಪ್ರಕಟಿಸಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !