ಸೋಮವಾರ, ಡಿಸೆಂಬರ್ 9, 2019
19 °C

ಬಾಲಕನನ್ನು ಕೊಂದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ, ಮೂರು ವರ್ಷದ ಬಾಲಕನನ್ನು ಚಿರತೆಯೊಂದು ಹೊತ್ತೊಯ್ದು, ಸಾಯಿಸಿದೆ.

‘ಗ್ರಾಮದ ಬುಡ್ಗ ಜಂಗಮ ಸಮುದಾಯದ ಅಶ್ವ ರಾಘವೇಂದ್ರ–ಮಮತಾ ಅವರ ಮಗ ವೆಂಕಟಸ್ವಾಮಿ, ಮಂಗಳವಾರ ಸಂಜೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಬಂದ ಚಿರತೆ ಆತನನ್ನು ಹೊತ್ತುಕೊಂಡು ಹೋಯಿತು. ಬಾಲಕನ ತಾಯಿ ಹಾಗೂ ಗ್ರಾಮಸ್ಥರು ಬೆನ್ನಟ್ಟಿ ಹೋದರು. ಮುಳ್ಳಿನ ಪೊದೆಯಲ್ಲಿ ಸುಮಾರು ಅರ್ಧ ತಾಸು ಹುಡುಕಾಡಿದ ನಂತರ ಬಾಲಕನ ಶವ ಪತ್ತೆಯಾಯಿತು’ ಎಂದು ಪ್ರತ್ಯಕ್ಷದರ್ಶಿ ಎಸ್‌.ಕೆ.ಬಸವರಾಜ ತಿಳಿಸಿದರು.

ಎರಡು ತಿಂಗಳ ಹಿಂದೆ ಗ್ರಾಮದ ಕುರಿ ಹಟ್ಟಿ ಮೇಲೆ ದಾಳಿ ನಡೆಸಿದ್ದ ಚಿರತೆ, ಎಂಟು ಕುರಿ ಮರಿಗಳನ್ನು ಕೊಂದು ಹಾಕಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು