ಬುಧವಾರ, ಆಗಸ್ಟ್ 21, 2019
22 °C

ಎಲ್‌ಐಸಿ ಪರೀಕ್ಷೆ ಮುಂದಕ್ಕೆ

Published:
Updated:

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿರುವ ಕಾರಣ ಭಾನುವಾರ (ಆ.11) ನಡೆಯಬೇಕಿದ್ದ ಭಾರತೀಯ ಜೀವ ವಿಮಾ ನಿಗಮದ ಅಪ್ರೆಂಟೀಸ್‌ ಡೆವಲೆಪ್‌ಮೆಂಟ್‌ ಆಫೀಸರ್ (ಎಡಿಒ) ಹುದ್ದೆಯ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಪರೀಕ್ಷೆ ನಡೆಯಬೇಕಾಗಿತ್ತು. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ರವಿಕಿರಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post Comments (+)