ಬುಧವಾರ, ಆಗಸ್ಟ್ 4, 2021
23 °C

ಟೆಲಿಕಾಂ ಟವರ್‌ಗಳಿಗೆ ಲೈಸೆನ್ಸ್‌ ಕಡ್ಡಾಯ: ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಟೆಲಿಕಾಂ ಟವರ್‌ಗಳಿಗೆ ಆಯಾ ಕಂಪನಿಗಳು ಇನ್ನು ಮೂರು ತಿಂಗಳೊಳಗೆ ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ಟೆಲಿಕಾಂ ಟವರ್‌ ಅಳವಡಿಕೆ ಸಂಬಂಧ ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ದೂರಸಂಪರ್ಕ ಮೂಲಸೌಕರ್ಯ ಕಾಯಿದೆಗೆ ಹೊಸದಾಗಿ ಕೆಲವು ನಿಯಮಗಳನ್ನು ಸೇರಿಸಲಾಗಿದೆ. ಈವರೆಗೂ ಟೆಲಿಕಾಂ ಟವರ್‌ ಅಳವಡಿಕೆಗೆ ನಿರ್ದಿಷ್ಟ ನಿಯಮಗಳು ಇರಲಿಲ್ಲ. ಲೈಸೆನ್ಸ್‌ ಪಡೆಯುವ ಪದ್ಧತಿಯೂ ಇರಲಿಲ್ಲ. ಇದರಿಂದಾಗಿ ಮೊಬೈಲ್‌ ಕಂಪನಿಗಳು ಬೇಕಾ ಬಿಟ್ಟಿ ಟೆಲಿಕಾಂ ಟವರ್‌ಗಳನ್ನು ಹಾಕಿವೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೊಸ ನಿಯಮಗಳನ್ನು ಜಾರಿ ತರಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈಗ 30 ಸಾವಿರಕ್ಕೂ ಹೆಚ್ಚು ಒಎಫ್‌ಸಿ ಮತ್ತು ದೂರ ಸಂಪರ್ಕ ಟವರ್‌ಗಳಿವೆ. ಬೆಂಗಳೂರು ಒಂದರಲ್ಲೇ 6766 ಟವರ್‌ಗಳಿವೆ. ಇನ್ನು  ಮುಂದೆ ಹೊಸದಾಗಿ ಟವರ್‌ ಹಾಕಬೇಕಿದ್ದರೆ ಮಹಾನಗರಗಳಲ್ಲಿ ಶಾಲಾ– ಕಾಲೇಜು, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳಿಂದ ಕನಿಷ್ಠ 50 ಮೀಟರ್‌ ಅಂತರದಲ್ಲಿ ಟವರ್ ಅಳವಡಿಕೆ ಮಾಡಬೇಕು. ಈಗಾಗಲೇ 50 ಮೀಟರ್ ಒಳಗೆ ಇದ್ದರೆ ಅದನ್ನು ತೆರವುಗೊಳಿಸಿ ಬೇರೆ ಕಡೆಗಳಲ್ಲಿ ಹಾಕಬೇಕು ಎಂದು ಹೇಳಿದರು.

ಟೆಲಿಕಾಂ ಟವರ್‌ಗಳಿಂದ ಹೊಮ್ಮುವ ರೇಡಿಯೇಷನ್‌ನಿಂದ ಆರೋಗ್ಯ ಸಮಸ್ಯೆ ಆಗಲಿದೆ ಎಂಬುದರ ಬಗ್ಗೆ ಮೌಖಿಕ ದೂರುಗಳಷ್ಟೇ ಬಂದಿವೆ. ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆದರೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು