ಮುಚ್ಚಿದ ಲಿಂಗನಮಕ್ಕಿ ಗೇಟ್

7

ಮುಚ್ಚಿದ ಲಿಂಗನಮಕ್ಕಿ ಗೇಟ್

Published:
Updated:

ಕಾರ್ಗಲ್: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆ ನೀರಿನ ಪ್ರವಾಹ ತಗ್ಗಿದ್ದು, ಜಲಾಶಯದ ನೀರಿನ ಮಟ್ಟ 1817ಅಡಿ ತಲುಪಿದೆ.

ಒಳಹರಿವು 30 ಸಾವಿರ ಕ್ಯುಸೆಕ್ ಇದ್ದು, ವಿದ್ಯುತ್ ಉತ್ಪಾದನೆಗೆ 5 ಸಾವಿರ ಕ್ಯುಸೆಕ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆಯ ವೇಳೆಗೆ ಎಲ್ಲಾ 11 ರೇಡಿಯಲ್ ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ಮಾಹಿತಿ ನೀಡಿದರು.

ಜಲಾಶಯದಲ್ಲಿ ಗರಿಷ್ಠ ಪ್ರಮಾಣವಾದ ಸಮುದ್ರ ಮಟ್ಟದಿಂದ 1819 ಅಡಿ ಎತ್ತರದವರೆಗೆ ನೀರನ್ನು ಸಂಗ್ರಹಿಸಿಡಲು ಸಾಧ್ಯವಿದೆ. ಒಮ್ಮೆಲೆ ಪ್ರವಾಹ ಹೆಚ್ಚಿದಾಗ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೊರಹಾಯಿಸಲಾಗಿತ್ತು. ಹಾಲಿ ಇರುವ ಒಳಹರಿವನ್ನು ಹಂತ ಹಂತವಾಗಿ ಅಣೆಕಟ್ಟೆಯ ಗರಿಷ್ಠ ಪ್ರಮಾಣದವರೆಗೆ ಸಂಗ್ರಹಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !