ಬಿಸಿಯೂಟದಲ್ಲಿ ಹಲ್ಲಿ; ಮಕ್ಕಳು ಅಸ್ವಸ್ಥ

7

ಬಿಸಿಯೂಟದಲ್ಲಿ ಹಲ್ಲಿ; ಮಕ್ಕಳು ಅಸ್ವಸ್ಥ

Published:
Updated:

ತುಮಕೂರು: ತುರುವೇಕೆರೆ ತಾಲ್ಲೂಕು ತುಯ್ಯಲಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮಧ್ಯಾಹ್ನ ಹಲ್ಲಿ ಬಿದ್ದ ಊಟ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದಾರೆ.

ಬಿಸಿಯೂಟ ಸೇವಿಸಿದ ಪ್ರಾಥಮಿಕ ಶಾಲೆಯ 140 ಮಕ್ಕಳಲ್ಲಿ 14 ಮಕ್ಕಳು ಅಸ್ವಸ್ಥರಾಗಿದ್ದು ತುರುವೇಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರತ್ನ ಮತ್ತು ರಂಜಿತಾ ಎಂಬ ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳು ಇದ್ದಾರೆ. ಮೊದಲು ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಕೆಲ ಶಿಕ್ಷಕರು ಊಟ ಮಾಡಿದ್ದಾರೆ. ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಊಟ ಬಡಿಸುವಾಗ ಅನ್ನದಲ್ಲಿ ‘ಹಲ್ಲಿ’ ಬಿದ್ದಿರುವುದು ಕಂಡಿದೆ. ಇದನ್ನು ಕಂಡ ಮಕ್ಕಳು ಗಾಬರಿಗೊಂಡು ಊಟ ಬಿಟ್ಟು ಮನೆಗೆ ತೆರಳಿದ್ದಾರೆ. 

(ಪೋಷಕರು ಮಕ್ಕಳನ್ನು ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಕರೆ ತಂದಿರುವುದು)

ಅನ್ನದಲ್ಲಿ ಹಲ್ಲಿ ಬಿದ್ದಿರುವ ವಿಷಯ ತಿಳಿಯದೆ ಮೊದಲು ಊಟ ಮಾಡಿದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಗಾಬರಿಯಲ್ಲಿ ಕೆಲ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. 140 ಮಕ್ಕಳನ್ನೂ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಅಸ್ವಸ್ಥರಾದ 14 ಮಕ್ಕಳಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಯಾವ ಮಕ್ಕಳ ಜೀವಕ್ಕೂ ಅಪಾಯವಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಿಸಿಯೂಟದ ಅನ್ನದಲ್ಲಿ ಹಲ್ಲಿ ಇರುವುದನ್ನು ನೋಡಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !