ಸಾಲ ಮನ್ನಾ: ಪ್ಯಾನ್‌ ಸಂಖ್ಯೆ ಕಡ್ಡಾಯವಲ್ಲ

7
ಬಂಡೆಪ್ಪ ಕಾಶೆಂಪೂರ

ಸಾಲ ಮನ್ನಾ: ಪ್ಯಾನ್‌ ಸಂಖ್ಯೆ ಕಡ್ಡಾಯವಲ್ಲ

Published:
Updated:

ಬೆಂಗಳೂರು: ಸಹಕಾರ ಸಂಘಗಳಲ್ಲಿನ ಬೆಳೆ ಸಾಲ ಮನ್ನಾಕ್ಕಾಗಿ ಸಲ್ಲಿಸುವ ಸಾಲದ ವಿವರಗಳ ಪ್ರಮಾಣಪತ್ರಕ್ಕೆ ಪ್ಯಾನ್‌ ಕಾರ್ಡ್‌ ಕಡ್ಡಾಯವಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.

‘ಸಹಕಾರ ಸಂಘಗಳ ಸಾಲ ಮನ್ನಾ ಮೊತ್ತ ಕ್ಲೇಮು ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಸರಳ ಮಾರ್ಗಸೂಚಿ ಹೊರಡಿಸಲಾಗಿದೆ. ಕುಟುಂಬ ವಿವರಗಳು ಹಾಗೂ ಪಡೆದ ಸಾಲಗಳ ವಿವರದ ಪ‍್ರಮಾಣ ಪತ್ರವನ್ನು ರೈತ ಕುಟುಂಬದ ಮುಖ್ಯಸ್ಥ ಸಲ್ಲಿಸಬೇಕಿದೆ. ಇಲ್ಲಿ ಕೇಳಿರುವ ಎಲ್ಲ ಮಾಹಿತಿಗಳು ಸರಳವಾಗಿದ್ದು, ರೈತರು ಯಾವುದೇ ಆತಂಕ ಪಡಬೇಕಿಲ್ಲ’ ಎಂದು ಅವರು ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !