‘ಸಾಲಮನ್ನಾ: ರೈತರಿಗೆ ವಂಚನೆ’

7

‘ಸಾಲಮನ್ನಾ: ರೈತರಿಗೆ ವಂಚನೆ’

Published:
Updated:

ಹಾವೇರಿ:  ರೈತರ ಸಾಲ ಮನ್ನಾ ಘೋಷಣೆಗೂ ಮೊದಲೇ ‘ರಾಜ್ಯ ಮಟ್ಟದ ಬ್ಯಾಂಕರ್ಸ್‌ ಸಮಿತಿ’ (ಎಸ್ಎಲ್‌ಬಿಸಿ) ಸಂಚಾಲಕರಿಗೆ ಪತ್ರ ಬರೆದಿರುವ ರಾಜ್ಯ ಸರ್ಕಾರವು, ರೈತರ ಬೆಳೆ ವಿಮೆ ಮತ್ತಿತರ ಹಣವನ್ನು ಸುಸ್ತಿ ಸಾಲಕ್ಕೆ ಜಮಾ ಮಾಡುವಂತೆ ಸೂಚನೆ ನೀಡಿತ್ತು ಎಂದು ಶಾಸಕ ಸಿ.ಎಂ. ಉದಾಸಿ ಆರೋಪಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜುಲೈ 5ರಂದು ಬಜೆಟ್‌ನಲ್ಲಿ ಸಾಲಮನ್ನಾದ ಘೋಷಣೆ ಮಾಡಿದ್ದರು. ಆದರೆ, ಜುಲೈ 3ರಂದೇ ಸರ್ಕಾರವು ಬರೆದಿರುವ ಪತ್ರವು ಲಭ್ಯವಾಗಿದೆ ಎಂದ ಅವರು, ಇದರಿಂದ ಮುಖ್ಯಮಂತ್ರಿಗಳ ರೈತ ಪರ ಕಾಳಜಿಯು ಬೆಳಕಿಗೆ ಬಂದಿದೆ ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಹೆಚ್ಚು ದಿನಗಳ ಭವಿಷ್ಯವಿಲ್ಲ ಎಂಬುದು ಕಾಂಗ್ರೆಸ್ ಮತ್ತು ಜೆಡಿಎಸ್ ಕಚ್ಚಾಟದಿಂದ ಸಾಬೀತಾಗಿದೆ. ಅಲ್ಲದೇ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅವಧಿ ಪೂರ್ಣಗೊಳಿಸಿದ ಇತಿಹಾಸವೂ ಇಲ್ಲ. ಹೀಗಾಗಿ, ಶೀಘ್ರವೇ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !