ಮಹಿಳೆಗೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ ನೋಟಿಸ್‌

7
ಕೆನರಾ ಬ್ಯಾಂಕ್‌ ಸಿಂಧುಘಟ್ಟ ಶಾಖೆಯಿಂದ ಕ್ರಮ

ಮಹಿಳೆಗೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ ನೋಟಿಸ್‌

Published:
Updated:
Prajavani

ಕೆ.ಆರ್.ಪೇಟೆ: ತಾಲ್ಲೂಕಿನ ಶಿವಪುರ ಗ್ರಾಮದ ರೈತ ಮಹಿಳೆ ಮಂಜುಳಮ್ಮ ಎಂಬುವರಿಗೆ ಕೆನರಾ ಬ್ಯಾಂಕ್‌ ಸಿಂಧುಘಟ್ಟ ಶಾಖೆಯು ಸಾಲ ಮರುಪಾವತಿ ಮಾಡುವಂತೆ ನೋಟಿಸ್‌ ನೀಡಿದೆ.

ಚಂದ್ರೇಗೌಡ 6 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ ಅಧಿಕಾರಿಗಳು 2016ರಲ್ಲಿ ನೋಟಿಸ್‌ ನೀಡಿದ್ದರು. ಈಗ ಮತ್ತೊಮ್ಮೆ ನೀಡಿದ್ದಾರೆ. ಸಾಲ ಮರುಪಾವತಿ ಮಾಡದಿದ್ದರೆ ಕಾನೂನು ಪ್ರಕಾರ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.‌

‘ಸರ್ಕಾರ ಸಾಲಮನ್ನಾ ಮಾಡಿದ್ದು, ರೈತರು ಆತಂಕ ಪಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ, ಬ್ಯಾಂಕ್‌ನವರು ನೋಟಿಸ್ ಮೇಲೆ ನೋಟಿಸ್‌ ಕೊಡುತ್ತಿದ್ದಾರೆ. ಇದೇ ತಿಂಗಳು ಕೋರ್ಟ್‌ನಲ್ಲಿ ವಿಚಾರಣೆ ಇದೆ. ಏನು ಮಾಡಬೇಕೋ ತಿಳಿಯುತ್ತಿಲ್ಲ’ ಎಂದು ಮಂಜುಳಮ್ಮ ಅಳಲು ತೋಡಿಕೊಂಡರು.‌

‘ಬ್ಯಾಂಕ್‌ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದು, ಇಬ್ಬರು ಮಕ್ಕಳೊಂದಿಗೆ ಬ್ಯಾಂಕ್‌ ಎದುರು ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !