ಸಾಲಮನ್ನಾ: ವಾರದೊಳಗೆ ಆದೇಶ

7

ಸಾಲಮನ್ನಾ: ವಾರದೊಳಗೆ ಆದೇಶ

Published:
Updated:

ಬೆಂಗಳೂರು: ‘ಸಹಕಾರಿ ಸಂಸ್ಥೆಗಳಲ್ಲಿರುವ ₹1 ಲಕ್ಷದವರೆಗಿನ ರೈತರ ಚಾಲ್ತಿ ಸಾಲ ಮನ್ನಾ ಘೋಷಣೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ವಾರದೊಳಗೆ ಆದೇಶ ಹೊರಡಿಸಲಿದೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಶನಿವಾರ ತಿಳಿಸಿದರು.

 ‘ಸಾಲ ಮನ್ನಾ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಈ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಅರ್ಹ ರೈತರಿಗೆ ಋಣಮುಕ್ತ ಪತ್ರ ನೀಡಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಒಂದು ವೇಳೆ ಸಾಲದ ಪುನರ್ ನವೀಕರಣಕ್ಕೆ ಇನ್ನೂ ಸಮಯ ಇದ್ದರೆ ಅಂತಹ ರೈತರಿಗೆ ಈಗಲೇ ಮಾಹಿತಿ ನೀಡಲಾಗುವುದು’ ಎಂದೂ ತಿಳಿಸಿದರು.

ದೂರು ಬಂದರೆ ಕ್ರಮ: ‘ಸಹಕಾರಿ ಸಂಸ್ಥೆ ಕಾರ್ಯದರ್ಶಿಗಳು ರೈತರ ಸಾಲ ಮನ್ನಾದ ಪುನರ್ ನವೀಕರಣ ಮಾಡಿಕೊಂಡು ಹಣ ಪಡೆಯುವ ಚೀಟಿಗಳನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಅಡ್ಡಾಡುತ್ತಿದ್ದಾರೆ ಎಂದು ಕೆಲವು ಗ್ರಾಮಗಳಿಂದ ನನಗೆ ದೂರು ಬಂದಿವೆ. ಒಂದು ವೇಳೆ ಈ ರೀತಿ ಏನಾದರೂ ಆದದ್ದು ಸಾಬೀತಾದರೆ ಅಂತಹ ಕಾರ್ಯದರ್ಶಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !