ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ನ. 12ರಂದು ಮತದಾನ

ನಾಮಪತ್ರ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ
Last Updated 20 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆ, ಮಂಗಳೂರು ಮಹಾನಗರಪಾಲಿಕೆ, ಶಿವಮೊಗ್ಗ ಜಿಲ್ಲೆ ಜೋಗ– ಕಾರ್ಗಲ್‌ ಪಟ್ಟಣ ಪಂಚಾಯತಿ, ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆ, ಕೂಡ್ಲಗಿ ಪಟ್ಟಣ ಪಂಚಾಯತಿ ಸೇರಿ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ನವೆಂಬರ್‌ 12ರಂದು ಚುನಾವಣೆ ನಡೆಯಲಿದೆ.

ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದ್ದು, ಇದೇ 24ರಂದು ಆಯಾ ಜಿಲ್ಲೆಗಳ ಜಿಲ್ಲಾಧಿ
ಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಅ. 20ರಿಂದಲೇ ಅನ್ವಯವಾಗುವಂತೆ ಚುನಾವಣೆ ನೀತಿಸಂಹಿತೆ ಜಾರಿಗೆ ಬಂದಿದ್ದು, ನ.14ರ ವರೆಗೂ ಜಾರಿಯಲ್ಲಿ ಇರುತ್ತದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನ ಅ.31, ನಾಮಪತ್ರಗಳ ಪರಿಶೀಲನೆ ನ.2, ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನ ನ.4, ಮತದಾನ ನ.12, ಮತಗಳ ಎಣಿಕೆ ನ.14ರಂದು ನಡೆಯಲಿದೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚ ಗರಿಷ್ಠ ಮಿತಿ ಈ ರೀತಿ ಇದೆ– ಮಹಾನಗರ ಪಾಲಿಕೆ (ಬಿಬಿಎಂಪಿ ಹೊರತುಪಡಿಸಿ) ₹3 ಲಕ್ಷ, ನಗರಸಭೆ ₹2 ಲಕ್ಷ, ಪುರಸಭೆ ₹1.50 ಲಕ್ಷ, ಪುಟ್ಟಣ ಪಂಚಾಯತಿ
₹1 ಲಕ್ಷ.

14 ನಗರ ಸ್ಥಳೀಯ ಸಂಸ್ಥೆಗಳಲ್ಲಿ 1388 ಮತಗಟ್ಟೆ ಇರಲಿದ್ದು, ಒಟ್ಟು 418 ವಾರ್ಡ್‌ಗಳಿಗೆ 13,04,614 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎನ್‌.ಆರ್‌.ನಾಗರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT