ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌‌ಡೌನ್: ಮದ್ಯಕ್ಕಾಗಿ ಬಾರ್, ಮನೆಗಳಲ್ಲಿ ಕಳ್ಳತನ

Last Updated 10 ಏಪ್ರಿಲ್ 2020, 9:45 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಡೆಲಾಕ್‌ಡೌನ್ ಕಾರಣದಿನದಿಂದ ದಿನಕ್ಕೆ ಮದ್ಯವ್ಯಸನಿಗಳು ಮದ್ಯ ಸಿಗದೆ ಹತಾಶರಾಗಿದ್ದರೆ, ಮತ್ತೊಂದು ಕಡೆ ಬಾರ್‌‍‌ಗಳಲ್ಲಿ, ಮನೆಗಳಲ್ಲಿಬೀಗ ಮುರಿದು ಭಾರಿ ಪ್ರಮಾಣದ ಮದ್ಯವನ್ನು ಕಳ್ಳತನ ಮಾಡಲಾಗಿದೆ.

ಬಾರ್‌ಗಳಲ್ಲಿ ಕಳ್ಳತನ, ಮನೆಗಳಲ್ಲಿ ಮದ್ಯ ಕಳವು ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಪೊಲೀಸರು ಈಗದಾಖಲಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಹಲವು ಕಡೆಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ
ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಲಾಕ್‌ಡೌನ್ ಸಂದರ್ಭಅಬಕಾರಿ ಇಲಾಖೆಯಿಂದ ಮುದ್ರೆ ಒತ್ತಿ ಬಂದ್ಮಾಡಲಾಗಿದ್ದ ಮೂರು ಬಾರ್‌‌ಗಳಲ್ಲಿ ದುಷ್ಕರ್ಮಿಗಳು ಬೀಗ ಮುರಿದು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ್ದಾರೆ.ಈ ಸಂಬಂಧ ಮಾಲೀಕರು ತಮ್ಮ ಅಂಗಡಿಗಳಲ್ಲಿ ಮದ್ಯ ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಅಬಕಾರಿ ಇಲಾಖೆಯಿಂದ ಮುದ್ರೆ ಒತ್ತಿ ಬಂದ್ ಮಾಡಲಾಗಿದ್ದು ಮುದ್ರೆಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗಿಲ್ಲ ಬದಲಿಗೆ ಷಟರ್ ಮುರಿದು, ಗೋಡೆ ಕೊರೆದುಬಾರ್‌ಗಳಲ್ಲಿ ಕಳವು ಮಾಡಲಾಗಿದೆ. ಈ ಸಂಬಂಧ ಕರ್ನಾಟಕ ಅಬಕಾರಿ ಕಾಯ್ದೆಯ ಅನ್ವಯಪೊಲೀಸರು ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಬನಶಂಕರಿಯ ವೈಷ್ಣವಿ ಪ್ಯಾಲೇಸ್ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಸ್ಥಾಪಕ ಅಜಿತ್ ಸಿ.ಅಮೀನ್ ತಲಘಟ್ಟಪುರ ಪೊಲೀಸರಿಗೆ ದೂರು ನೀಡಿದ್ದು, ಮಾರ್ಚ್ 21ರಂದು ಅಬಕಾರಿ ಇಲಾಖೆನಿರ್ದೇಶನದಂತೆ ಲಾಕ್‌‌ಡೌನ್ ಕಾರಣ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಿದ್ದೆವು. ಆದರೆ, ಏಪ್ರಿಲ್ 6ರಂದು ನನ್ನ ಸ್ನೇಹಿತ ಕರೆ ಮಾಡಿ ಬಾರ್‌‌ನಲ್ಲಿ ಕಳ್ಳತನವಾಗಿ ಬಂದು ನೋಡು ಎಂದ. ಕೂಡಲೆ ಸ್ಥಳಕ್ಕೆ ಧಾವಿಸಿದಾಗ ಅಲ್ಲಿ ಕಳ್ಳರು ಷಟರ್ಮುರಿದು ಅಲ್ಲಿ ಇಡಲಾಗಿದ್ದ ಹಣ ಹಾಗೂ ಮದ್ಯದ ಬಾಟಲಿಗಳನ್ನು ದೋಚಿದ್ದಾರೆ. ಕೂಡಲೆ ಪೊಲೀಸರಿಗೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದೆ ಎಂದು ಹೇಳಿದ್ದಾರೆ.

ಅದೇ ದಿನ ರಾತ್ರಿ ದುಷ್ಕರ್ಮಿಗಳು ತಲಘಟ್ಟಪುರ ವ್ಯಾಪ್ತಿಯ ಕೆಂಬತ್ತಹಳ್ಳಿಯ ಎಸ್.ವಿ ಬಾರ್ ಅಂಡ್ ರೆಸ್ಟೋರೆಂಟ್‌‌ನಲ್ಲಿ ರೋಲಿಂಗ್ ಷಟರ್ ಮುರಿದುಮದ್ಯದ ಬಾಟಲಿಗಳನ್ನು ದೋಚಿದ್ದಾರೆ.ಹೊರಮಾವು ಪ್ರದೇಶದಲ್ಲಿ ಏಪ್ರಿಲ್ 5ರ ಬೆಳಗಿನ ಜಾವ ದುಷ್ಕರ್ಮಿಗಳು ಕವಿತಾ ಗಾರ್ಡನ್ ಬಾರ್‌ನಲ್ಲಿ ಬಾಗಿಲುಮುರಿದು ಅಲ್ಲಿದ್ದ ₹48ಸಾವಿರ ಬೆಲೆಯ ಮದ್ಯ ಕಳವು ಮಾಡಿದ್ದಾರೆ.

ಮನೆಯಲ್ಲಿದ್ದ ಮದ್ಯ ಕಳವುಫ್ರೇಜರ್ ಟೌನ್ ವ್ಯಾಪ್ತಿಯಲ್ಲಿ ಬುಧವಾರ ತುಳಸಿದಾಸ್ ಎಂಬವರ ಮನೆಯ ಬಾಗಿಲು ಮುರಿದ ದುಷ್ಕರ್ಮಿಗಳು ಅಲ್ಲಿದ್ದ ಸುಮಾರು 10 ಮದ್ಯದ ಬಾಟಲಿಗಳು, 5 ಸಾವಿರ ನಗದು, ಕೈಗಡಿಯಾರಗಳು, ಮಿಕ್ಸರ್ ಕಳವು ಮಾಡಿದ್ದಾರೆ.

ಅಕ್ರಮ ಮದ್ಯ ಮಾರಾಟ

ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕುಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ವಿರುದ್ದ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.ಖಾಲಿ ನಿವೇಶನದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಶಿವರಾಮ್ (33) ಎಂಬಾತನನ್ನು ಬಂಧಿಸಿರುವ ರಾಜಾಜಿನಗರ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT