ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಮೇನಿಯ ತಂಡಕ್ಕೆ ಫುಟ್‌ಬಾಲ್‌ ಟ್ರೋಫಿ

Last Updated 27 ಮಾರ್ಚ್ 2018, 6:29 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕ್ರೀಡೆಗಳಿಂದ ಯುವಕರಲ್ಲಿ ದೈಹಿಕ, ಮಾನಸಿಕ ಸಾಮರ್ಥ್ಯ ಪ್ರಗತಿಯಾಗುವುದರ ಜತೆಗೆ, ಎಲ್ಲರಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಕಾಂಗ್ರೆಸ್‌ ಮುಖಂಡ ವಿ.ಮುನಿಯಪ್ಪ ತಿಳಿಸಿದರು.

ನ್ಯಾಷನಲ್‌ ಫುಟ್‌ಬಾಲ್‌ ಕ್ಲಬ್‌ ಮತ್ತು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ದಿ. ಡಾ.ಎಂ.ಶ್ರೀಧರ್‌ ಸ್ಮರಣಾರ್ಥ ಫುಟ್‌ ಬಾಲ್‌ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಒಳ್ಳೆಯ ಹವ್ಯಾಸ ಗಳನ್ನು ಬೆಳೆಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಯುವಜನರನ್ನು ಕ್ರೀಡೆಯತ್ತ ಸೆಳೆಯಲು ಫುಟ್‌ಬಾಲ್‌ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಚಿಲಕಲನೇರ್ಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಶಶಿಧರ್‌ ಮಾತನಾಡಿ, ಕ್ರೀಡೆ ಮತ್ತು ಆರೋಗ್ಯ ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುವ ವೈಜ್ಞಾನಿಕ ಕ್ರಮವೇ ಕ್ರೀಡೆ ಎಂದು ತಿಳಿಸಿದರು.

ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು, ಕೆಜಿಎಫ್‌ ಮೊದಲಾದ 32 ತಂಡಗಳು ಭಾಗವಹಿಸಿದ್ದವು.

ಕೀನ್ಯಾ ದೇಶದ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದ ರುಮೇನಿಯಾ ತಂಡ ಪ್ರಶಸ್ತಿಯೊಂದಿಗೆ ₹ 50 ಸಾವಿರ ಮತ್ತು ಟ್ರೋಫಿ ಪಡೆಯಿತು. ಶಿಡ್ಲಘಟ್ಟದ ನ್ಯಾಷನಲ್‌ ಫುಟ್‌ಬಾಲ್‌ ತಂಡ ದ್ವಿತೀಯ (ದ್ವಿತೀಯ ಬಹುಮಾನ ₹ 25 ಸಾವಿರ) ಮತ್ತು ಕೇರಳ ತಂಡ ತೃತೀಯ (₹ 15 ಸಾವಿರ) ಬಹುಮಾನ ಪಡೆಯಿತು.

ನ್ಯಾಷನಲ್‌ ಫುಟ್‌ಬಾಲ್‌ ಕ್ಲಬ್‌ ಅಧ್ಯಕ್ಷ ಹಫೀಜುಲ್ಲಾ, ರಾಜ್‌ಕುಮಾರ್‌, ಶ್ರೀನಾಥ್‌, ತಾಜ್‌ಪಾಷಾ, ಕಾಂಗ್ರೆಸ್‌ ಸಮಿತಿ ಮಹಿಳಾ ಬ್ಲಾಕ್‌ ಅಧ್ಯಕ್ಷೆ ಯಾಸ್ಮೀನ್‌ತಾಜ್‌, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಮ್ಜದ್‌ನವಾಜ್‌, ಅನ್ಸರ್‌ಖಾನ್‌, ಹಿರಿಯ ಆಟಗಾರರಾದ ಷಯೀದ್‌ಪಾಷಾ, ಮುಜಾಹಿದ್‌ಪಾಷಾ, ಆರಿಫ್‌ಪಾಷಾ, ಮೌಲಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT