ಲೋಕಸಭಾ ಚುನಾವಣೆ: ಯಾರಿಗೂ ಇಲ್ಲ ಬಹುಮತ

7
ಎಬಿಪಿ–ಸಿ ವೋಟರ್‌ ಸಮೀಕ್ಷೆ

ಲೋಕಸಭಾ ಚುನಾವಣೆ: ಯಾರಿಗೂ ಇಲ್ಲ ಬಹುಮತ

Published:
Updated:

ಬೆಂಗಳೂರು: ಲೋಕಸಭೆಗೆ ಈಗ ಚುನಾವಣೆ ನಡೆದರೆ ಜನರು ಯಾವ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂಬ ಬಗ್ಗೆ ಎಬಿಪಿ ನ್ಯೂಸ್‌– ಸಿ ವೋಟರ್‌ ಸಮೀಕ್ಷೆ ನಡೆಸಿದೆ. ಯಾವುದೇ ಪಕ್ಷ ಅಥವಾ ಚುನಾವಣಾಪೂರ್ವ ಮೈತ್ರಿಕೂಟಕ್ಕೆ ಸರಳ ಬಹುಮತ ದೊರೆಯದು ಎಂದು ಸಮೀಕ್ಷೆ ಹೇಳಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಗೆ 233 ಸ್ಥಾನ ದೊರೆಯಬಹುದು. 545 ಸದಸ್ಯರ ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 273 ಸದಸ್ಯರ ಬೆಂಬಲ ಬೇಕು. 

ಕಾಂಗ್ರೆಸ್‌ ನೇತೃತ್ವದ ಯುಪಿಎಗೆ 167 ಕ್ಷೇತ್ರಗಳಲ್ಲಿ ಗೆಲುವು ದೊರೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. 130 ಕ್ಷೇತ್ರಗಳಲ್ಲಿ ಗೆಲ್ಲಲಿರುವ ಕಾಂಗ್ರೆಸ್‌–ಬಿಜೆಪಿಯೇತರ ಗುಂಪು ಮುಂದಿನ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.

2014ರಲ್ಲಿ ಸರಳ ಬಹುಮತ ಪಡೆದಿದ್ದ ಬಿಜೆಪಿಯ ಬಲ ಈ ಬಾರಿ 203 ಸ್ಥಾನಗಳಿಗೆ ಕುಸಿಯಬಹುದು. ಆದರೆ, 2014ರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷವು 109 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಂಕಷ್ಟ: ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ 80ರ ಪೈಕಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಎಸ್‌‍ಪಿ–ಬಿಎಸ್‌ಪಿ ಮೈತ್ರಿ ಭಾರಿ ಸವಾಲು ಒಡ್ಡಲಿದೆ. ಈ ಕೂಟವು 51 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಬಿಹಾರ, ರಾಜಸ್ಥಾನ, ಗುಜರಾತ್‌, ಮಧ್ಯ ಪ್ರದೇಶಗಳಲ್ಲಿ ಎನ್‌ಡಿಎ ಮೇಲುಗೈ ಸಾಧಿಸಲಿದೆ. ಪಂಜಾಬ್‌, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್‌, ಛತ್ತೀಸ ಗಡ ರಾಜ್ಯಗಳಲ್ಲಿ ಯುಪಿಎಗೆ ಹೆಚ್ಚು ಸ್ಥಾನಗಳು ದೊರೆಯಲಿವೆ. 

ಎಬಿಪಿ ನ್ಯೂಸ್‌– ಸಿ ವೋಟರ್‌ ಸಮೀಕ್ಷೆ

ಎನ್‌ಡಿಎ ;233

ಯುಪಿಎ ;167

ಇತರರು ;143

ಕರ್ನಾಟಕ

ಎನ್‌ಡಿಎ ;14

ಯುಪಿಎ ;14

ಇತರರು ;0

278 ಜಗನ್‌ ಮೋಹನ್‌ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌, ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಬೆಂಬಲ ಸಿಕ್ಕರೆ ಎನ್‌ಡಿಎ ಬಲ 278ಕ್ಕೆ ಏರಿಕೆಯಾಗಿ ಸರಳ ಬಹುಮತದ ಗಡಿ ಮೀರಬಹುದು.

257 ಅಸ್ಸಾಂನ ಎಐಯುಡಿಎಫ್‌, ಎಡರಂಗ, ತೃಣಮೂಲ ಕಾಂಗ್ರೆಸ್‌, ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದ ಬೆಂಬಲ ಸಿಕ್ಕಿದರೆ ಯುಪಿಎ ಬಲ 257ಕ್ಕೆ ಏರುತ್ತದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 1

  Frustrated
 • 9

  Angry

Comments:

0 comments

Write the first review for this !