ಲೋಕಸಭಾ ಉಪ ಚುನಾವಣೆಯಲ್ಲಿ ರಾಘವೇಂದ್ರನನ್ನು ಗೆಲ್ಲಿಸಿ: ಬಿಎಸ್‌ವೈ

7
ಶಿಕಾರಿಪುರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಮನವಿ

ಲೋಕಸಭಾ ಉಪ ಚುನಾವಣೆಯಲ್ಲಿ ರಾಘವೇಂದ್ರನನ್ನು ಗೆಲ್ಲಿಸಿ: ಬಿಎಸ್‌ವೈ

Published:
Updated:
Deccan Herald

ಶಿಕಾರಿಪುರ: ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

ತಾಲ್ಲೂಕಿನ ಮಾರವಳ್ಳಿ ಗ್ರಾಮದಲ್ಲಿ ಶನಿವಾರ ಏತ ನೀರಾವರಿ ಯೋಜನೆ ಡಿಪಿಆರ್‌ ಸಿದ್ಧತೆ ಅಂಗವಾಗಿ ಆಯೋಜಿಸಿದ್ದ ಸರ್ವೆ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವೆಂಬರ್‌ 3ರಂದು ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕೆಲವೇ ದಿನಗಳು ಬಾಕಿ ಇವೆ. ಬಿ.ವೈ. ರಾಘವೇಂದ್ರ ಜಿಲ್ಲೆಯಲ್ಲಿ ಪ್ರಸ್ತುತ ಓಡಾಟ ನಡೆಸಿದ್ದು, ರಾಘವೇಂದ್ರನನ್ನು ಪರಿಚಯ ಮಾಡಿಸುವ ಅಗತ್ಯ ಇಲ್ಲ. ಕಳೆದ ಬಾರಿ ನನ್ನನ್ನು ಹೆಚ್ಚು ಅಂತರದಿಂದ ಗೆಲ್ಲಿಸಿದ ರೀತಿಯಲ್ಲಿ ರಾಘವೇಂದ್ರನನ್ನು ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಬೇಕು’ ಎಂದು ಹೇಳಿದರು.

‘ಬೆಂಗಳೂರು ನಗರದಲ್ಲಿ ಪಕ್ಷಕ್ಕೆ ಕೆಲವೇ ಸ್ಥಾನಗಳು ಲಭಿಸಿದ ಕಾರಣ ನಾನು ಮುಖ್ಯಮಂತ್ರಿಯಾಗುವುದು ತಪ್ಪಿತು. ಇನ್ನೂ ಕಾಲ ಮಿಂಚಿಲ್ಲ, ಮುಂದೆ ನೋಡೋಣ’ ಎಂದು ಮಾರ್ಮಿಕವಾಗಿ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !