ತೀವ್ರಗೊಂಡ ಬೆಟ್ಟಿಂಗ್‌ ಭರಾಟೆ?

ಮಂಗಳವಾರ, ಜೂನ್ 18, 2019
30 °C
ಲೋಕಸಭಾ ಚುನಾವಣೆ ಫಲಿತಾಂಶ

ತೀವ್ರಗೊಂಡ ಬೆಟ್ಟಿಂಗ್‌ ಭರಾಟೆ?

Published:
Updated:

ಮಂಡ್ಯ: ಲೋಕಸಭಾ ಚುನಾವಣೆಯ ಸಮೀಕ್ಷಾ ವರದಿಗಳು ಹೊರಬರುತ್ತಿದ್ದಂತೆ, ಜಿಲ್ಲೆಯಾದ್ಯಂತ ಬೆಟ್ಟಿಂಗ್‌ ತೀವ್ರಗೊಂಡಿದ್ದಾಗಿ ತಿಳಿದುಬಂದಿದೆ.

ಮತದಾನ ಮುಗಿದ ನಂತರ, ಮೈತ್ರಿ ಪಕ್ಷದ ಅಭ್ಯರ್ಥಿ ಪರ ನಿಖಿಲ್‌ ಪರ ಹೆಚ್ಚು ಜನ ಹಣ ಕಟ್ಟುತ್ತಿದ್ದರು. ನಿಖಿಲ್‌ ಪರ ₹ 1ಲಕ್ಷ ಕಟ್ಟಿದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ₹ 80 ಸಾವಿರ ಕಟ್ಟಲು ಮುಂದಾಗುತ್ತಿದ್ದರು. ಸಮೀಕ್ಷಾ ವರದಿ ಬಹಿರಂಗವಾಗುತ್ತಿದ್ದಂತೆ ಬೆಟ್ಟಿಂಗ್‌ ಸಮಬಲಕ್ಕೆ ಬಂದಿದೆ ಎನ್ನಲಾಗಿದೆ.

‘ಪ್ರತಿ ಹಳ್ಳಿಯಲ್ಲಿ ನಂಬಿಕಸ್ಥ ವ್ಯಕ್ತಿಯನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು ಹಣ ಕಟ್ಟುತ್ತಿದ್ದಾರೆ. ನಗರ ಹಾಗೂ ಪಟ್ಟಣಗಳಲ್ಲಿ ಬೆಟ್ಟಿಂಗ್‌ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಯ ಸದಸ್ಯರೇ ಬೆಟ್ಟಿಂಗ್‌ ಪ್ರಕ್ರಿಯೆ ನೋಡಿಕೊಳ್ಳುತ್ತಿದ್ದಾರೆ. ಅವರ ಉಸ್ತುವಾರಿಯಲ್ಲೇ ಜನರು ಹಣ ಕಟ್ಟುತ್ತಿದ್ದಾರೆ. ನಗರಸಭಾ ಸದಸ್ಯರೊಬ್ಬರು ಮಧ್ಯವರ್ತಿಯಾಗಿ ₹ 1 ಕೋಟಿ ವ್ಯವಹಾರ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಭಾನುವಾರ ಸಮೀಕ್ಷಾ ವರದಿ ಪ್ರಕಟವಾದ ನಂತರ ಸೋಮವಾರದಿಂದ ಭರಾಟೆ ಹೆಚ್ಚಳವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜಕೀಯ ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು.

20–20ರ ಕುತೂಹಲ!: ಸಂಖ್ಯಾಶಾಸ್ತ್ರವನ್ನು ನಂಬುವ ಕೆಲವರು 20–20 ಸಂಖ್ಯೆಗಳ ಮೊರೆ ಹೋಗಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿದ್ದು ಮೇ 20ರಂದು ಬೆಟ್ಟಿಂಗ್‌ ಕಟ್ಟಿದರೆ 20–20 ಸಂಖ್ಯೆಗಳ ಅದೃಷ್ಟ ಒಲಿಯುತ್ತದೆ ಎಂದು ನಂಬಿದ್ದಾರೆ ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ಇಲ್ಲ

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌, ‘ಬೆಟ್ಟಿಂಗ್‌ ನಡೆಯುತ್ತಿರುವ ಬಗ್ಗೆ ಮಾಹಿತಿ ಅಥವಾ ದೂರು ಬಂದರೆ ಪ್ರಕರಣ ದಾಖಲು ಮಾಡುತ್ತೇವೆ. ಅದಕ್ಕಾಗಿಯೇ ತಂಡವೊಂದಕ್ಕೆ ಜವಾಬ್ದಾರಿ ನೀಡಲಾಗಿದೆ’ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌, ‘ಬೆಟ್ಟಿಂಗ್‌ ನಡೆಯುತ್ತಿರುವ ಬಗ್ಗೆ ಮಾಹಿತಿ ಅಥವಾ ದೂರು ಬಂದರೆ ಪ್ರಕರಣ ದಾಖಲು ಮಾಡುತ್ತೇವೆ. ಅದಕ್ಕಾಗಿಯೇ ತಂಡವೊಂದಕ್ಕೆ ಜವಾಬ್ದಾರಿ ನೀಡಲಾಗಿದೆ’ ಎಂದು ತಿಳಿಸಿದರು.

20–20ರ ಕುತೂಹಲ!

ಸಂಖ್ಯಾಶಾಸ್ತ್ರವನ್ನು ನಂಬುವ ಕೆಲವರು 20–20 ಸಂಖ್ಯೆಗಳ ಮೊರೆ ಹೋಗಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿದ್ದು ಮೇ 20ರಂದು ಬೆಟ್ಟಿಂಗ್‌ ಕಟ್ಟಿದರೆ 20–20 ಸಂಖ್ಯೆಗಳ ಅದೃಷ್ಟ ಒಲಿಯುತ್ತದೆ ಎಂದು ನಂಬಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !