ಮತಬೇಟೆಗೆ ‘ಜನಧ್ವನಿ’: ಸಂಭಾವ್ಯರ ಪಟ್ಟಿ ಸಿದ್ಧ?

7
ಲೋಕಸಭೆ ಚುನಾವಣೆ: ಸ್ಥಾನ ಇಮ್ಮಡಿಗೊಳಿಸಲು ‘ಕೈ’ ಕಾರ್ಯತಂತ್ರ

ಮತಬೇಟೆಗೆ ‘ಜನಧ್ವನಿ’: ಸಂಭಾವ್ಯರ ಪಟ್ಟಿ ಸಿದ್ಧ?

Published:
Updated:
Deccan Herald

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ಪಣ ತೊಟ್ಟಿರುವ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯದಲ್ಲಿ ಹಾಲಿ ಗೆದ್ದಿರುವ ಲೋಕಸಭಾ ಸ್ಥಾನಗಳನ್ನು ಇಮ್ಮಡಿಗೊಳಿಸಲು ಕಾರ್ಯತಂತ್ರ ರೂಪಿಸುತ್ತಿದೆ.

ಬೀದರ್‌ನಲ್ಲಿ ಸೋಮವಾರ ನಡೆಯಲಿರುವ ‘ಜನಧ್ವನಿ’ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಮೂಲಕ ಪಾಂಚಜನ್ಯ ಮೊಳಗಿಸಿ, ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಾಗಲು ಕೈ ಪಕ್ಷ ಮುಂದಾಗಿದೆ. ಸಾಕಷ್ಟು ಮೊದಲೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಮತಬೇಟೆ ಆರಂಭಿಸಲು ತೀರ್ಮಾನಿಸಿದೆ.

ರಾಹುಲ್ ನೀಡಿದ ಸೂಚನೆಯಂತೆ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಪರಿಗಣಿಸಬಹುದಾದ ಅಭ್ಯರ್ಥಿಗಳ ಪಟ್ಟಿಯೊಂದನ್ನು ರಾಜ್ಯ ಮುಖಂಡರು ಸಿದ್ಧಪಡಿಸಿದ್ದಾರೆ. ಪ್ರತಿ ಲೋಕಸಭೆ ಕ್ಷೇತ್ರಗಳಲ್ಲಿರುವ ಜಾತಿ ಲೆಕ್ಕಾಚಾರ, ಅಭ್ಯರ್ಥಿಗಳ ವರ್ಚಸ್ಸು, ಪ್ರಭಾವ ಆಧರಿಸಿ, ಕಣಕ್ಕಿಳಿಸಲು ‘ಅರ್ಹತೆ’ ಹೊಂದಿದವರ ಹೆಸರನ್ನು ಆಯ್ಕೆ ಮಾಡಲಾಗಿದೆ.

ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಲು ಪಕ್ಷ ಗಂಭೀರ ಚಿಂತನೆ ನಡೆಸಿದೆ. ಅಲ್ಲದೆ, ಹಾಲಿ, ಮಾಜಿ ಶಾಸಕರನ್ನು ಅಖಾಡಕ್ಕೆ ಇಳಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್‌ ಜತೆಗಿನ ಮೈತ್ರಿ ಮುಂದುವರಿಸಲು ನಿರ್ಧರಿಸಿರುವುದರಿಂದ, ಅದರ ಸಾಧಕ– ಬಾಧಕಗಳೇನು, ಯಾವೆಲ್ಲ ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು ಮತ್ತಿತರ ವಿಷಯಗಳ ಬಗ್ಗೆಯೂ ರಾಹುಲ್‌ ಮಾಹಿತಿ ಕೇಳಿದ್ದು, ಪಟ್ಟಿ ಸಿದ್ಧಪಡಿಸು
ವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹಾಲಿ ಪಕ್ಷ ಗೆದ್ದಿರುವ ಕ್ಷೇತ್ರಗಳ ಪೈಕಿ ಒಂದೋ, ಎರಡೋ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಚರ್ಚೆ ನಡೆದಿದೆ. ಉಳಿದಂತೆ, ಹಾಲಿ ಸದಸ್ಯರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಕಾಣಿಸಿಕೊಳ್ಳಲು ಸಿದ್ದರಾಮಯ್ಯ ಮನಸ್ಸು ಮಾಡಿದರೆ ಬಾಗಲಕೋಟೆ, ಕೊಪ್ಪಳ, ಮೈಸೂರಿನಿಂದ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಸಂಭವನೀಯ ಅಭ್ಯರ್ಥಿಗಳ ಪಟ್ಟಿ

* ಬೆಂಗಳೂರು ಕೇಂದ್ರ; ರೋಷನ್ ಬೇಗ್, ಎಚ್.ಟಿ. ಸಾಂಗ್ಲಿಯಾನ

* ಬೆಂಗಳೂರು ಉತ್ತರ; ರಿಜ್ವಾನ್‌ ಅರ್ಷದ್‌, ರಮ್ಯಾ, ಕೃಷ್ಣ ಬೈರೇಗೌಡ, 

* ಬೆಂಗಳೂರು ದಕ್ಷಿಣ; ಪ್ರಿಯಕೃಷ್ಣ, ಯು.ಬಿ. ವೆಂಕಟೇಶ

* ಬಳ್ಳಾರಿ; ಪ್ರಸಾದ್ (ಶಾಸಕ ಬಿ. ನಾಗೇಂದ್ರ ಸಹೋದರ), ರಾಮಪ್ರಸಾದ್

* ಚಾಮರಾಜನಗರ; ಆರ್‌. ಧ್ರುವನಾರಾಯಣ

* ಚಿಕ್ಕಬಳ್ಳಾಪುರ; ಎಂ.ವೀರಪ್ಪ ಮೊಯಿಲಿ, ಎಂ.ಆರ್. ಸೀತಾರಾಂ, ಪಕ್ಷ ತೊರೆದಿದ್ದ ಒಕ್ಕಲಿಗ ಮುಖಂಡ ಆಂಜನಪ್ಪ,

* ಬೆಂಗಳೂರು ಗ್ರಾಮೀಣ; ಡಿ.ಕೆ. ಸುರೇಶ

* ದಾವಣಗೆರೆ; ಎಸ್.ಎಸ್. ಮಲ್ಲಿಕಾರ್ಜುನ

* ಚಿತ್ರದುರ್ಗ; ಬಿ.ಎನ್‌. ಚಂದ್ರಪ್ಪ

* ಉತ್ತರ ಕನ್ನಡ; ಭೀಮಣ್ಣ ನಾಯ್ಕ್, ಬಿ.ಕೆ. ಹರಿಪ್ರಸಾದ್, ನಿವೇದಿತ್ ಆಳ್ವ

* ದಕ್ಷಿಣ ಕನ್ನಡ; ರಮಾನಾಥ ರೈ, ಮಿಥುನ್ ರೈ, ಬಿ.ಕೆ. ಹರಿಪ್ರಸಾದ್

* ಚಿಕ್ಕಮಗಳೂರು - ಉಡುಪಿ; ವಿನಯಕುಮಾರ ಸೊರಕೆ, ವೀರಪ್ಪ ಮೊಯಿಲಿ, ಜಯಪ್ರಕಾಶ ಹೆಗಡೆ (ಪಕ್ಷಕ್ಕೆ ಬಂದರೆ)

* ಶಿವಮೊಗ್ಗ;   ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಮಂಜುನಾಥ ಭಂಡಾರಿ,

* ಹಾವೇರಿ; ಡಿ.ಆರ್. ಪಾಟೀಲ

* ಹುಬ್ಬಳ್ಳಿ - ಧಾರವಾಡ; ವಿನಯ ಕುಲಕರ್ಣಿ, ಸಂತೋಷ ಲಾಡ್, 

* ತುಮಕೂರು; ಮುದ್ದಹನುಮೇಗೌಡ

* ಹಾಸನ; ಎ ಮಂಜು

* ಮೈಸೂರು; ಸಿ.ಎಚ್.ವಿಜಯಶಂಕರ, ಅಂಬರೀಷ್

* ಮಂಡ್ಯ; ಅಂಬರೀಷ್, ಚೆಲುವರಾಯಸ್ವಾಮಿ

* ಕೋಲಾರ; ಕೆ.ಎಚ್. ಮುನಿಯಪ್ಪ

* ರಾಯಚೂರು; ಬಿ.ವಿ. ನಾಯಕ

* ಕಲಬುರ್ಗಿ; ಮಲ್ಲಿಕಾರ್ಜುನ ಖರ್ಗೆ

* ವಿಜಯಪುರ; ಶಿವರಾಜ ತಂಗಡಗಿ, ಆರ್.ಬಿ. ತಿಮ್ಮಾಪೂರ

* ಕೊಪ್ಪಳ; ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ

* ಬಾಗಲಕೋಟೆ; ಎಸ್.ಆರ್. ಪಾಟೀಲ, ವೀಣಾ ಕಾಶಪ್ಪನವರ, ಅಜಯಕುಮಾರ ಸರನಾಯಕ್

* ಬೀದರ್; ಅಜಯ್‌ ಸಿಂಗ್

* ಬೆಳಗಾವಿ; ಲಕ್ಷ್ಮೀ ಹೆಬ್ಬಾಳ್ಕರ, ಸತೀಶ ಜಾರಕಿಹೊಳಿ

* ಚಿಕ್ಕೋಡಿ; ಪ್ರಕಾಶ ಹುಕ್ಕೇರಿ

ರಾಜ್ಯದ ಸಂಸದರ ಬಲಾಬಲ

28

ಒಟ್ಟು ಸ್ಥಾನ

15

ಬಿಜೆಪಿ

9

ಕಾಂಗ್ರೆಸ್‌

1

ಜೆಡಿಎಸ್‌

(ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ, ಶ್ರೀರಾಮುಲು ಹಾಗೂ ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !