ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನಿಜುವೆಲಾ ಜೈಲಿನಿಂದ ಪರಾರಿಗೆ ಯತ್ನ: 68 ಕೈದಿಗಳು ಸಾವು

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವೆಲೆನ್ಸಿಯಾ, ವೆನಿಜುವೆಲಾ: ಇಲ್ಲಿನ ಜೈಲಿನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅನಾಹುತದಲ್ಲಿ 68 ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ.

ಕರಾಬೊಬೊ ರಾಜ್ಯದ ಪೊಲೀಸ್‌ ಕೇಂದ್ರ ಕಚೇರಿಯ ಜೈಲಿನಲ್ಲಿ ಈ ಅನಾಹುತ ಸಂಭವಿಸಿದೆ. ಜೈಲಿನ ಭದ್ರತಾ ಸಿಬ್ಬಂದಿಯ ಬಂದೂಕುಗಳನ್ನು ಕದ್ದಿದ್ದ ಕೈದಿಗಳು, ಹಾಸಿಗೆಗೆ ಬೆಂಕಿ ಹಚ್ಚಿ ಪರಾರಿಯಾಗಲು ಸಂಚು ರೂಪಿಸಿದ್ದರು. ಆದರೆ ಈ ಯತ್ನ ವಿಫಲಗೊಂಡಿದ್ದೇ ಇಷ್ಟೊಂದು ಮಂದಿ ಸಾವನ್ನಪ್ಪಲು ಕಾರಣವಾಗಿದೆ.

‘ಜೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಕೈದಿಗಳತ್ತ ಅಶ್ರುವಾಯು ಸಿಡಿಸಿದರು. ಈ ವೇಳೆ ಕೈದಿಗಳು ತಪ್ಪಿಸಿಕೊಳ್ಳುವಾಗ ಕೆಲವರು ಬೆಂಕಿಗೆ ಆಹುತಿಯಾದರೆ, ಇನ್ನುಳಿದವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಇಡೀ ಘಟನೆ ಕುರಿತಂತೆ ತನಿಖೆ ನಡೆಸಲು ನಾಲ್ವರು ಪ್ರಾಸಿಕ್ಯೂಟರ್‌ಗಳನ್ನು ನೇಮಿಸಲಾಗಿದೆ’ ಎಂದು ಮುಖ್ಯ ಪ್ರಾಸಿಕ್ಯೂಟರ್‌ ತಾರೆಕ್‌ ವಿಲ್ಲಿಯಂ ಸಾಬ್‌ ತಿಳಿಸಿದ್ದಾರೆ.

ಸಂಬಂಧಿಕರ ಆಕ್ರೋಶ: ಕೈದಿಗಳ ಸಾವಿನ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ, ಅವರ ಸಂಬಂಧಿಕರು ಜೈಲಿನ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT