ರಾಜ್ಯದಲ್ಲಿ 5.10 ಕೋಟಿ ಮತದಾರರು

ಮಂಗಳವಾರ, ಏಪ್ರಿಲ್ 23, 2019
32 °C
2014ರ ಲೋಕಸಭೆ ಚುನಾವಣೆಯಲ್ಲಿ 4.62 ಕೋಟಿ ಮತದಾರರು ಇದ್ದರು

ರಾಜ್ಯದಲ್ಲಿ 5.10 ಕೋಟಿ ಮತದಾರರು

Published:
Updated:

ಬೆಂಗಳೂರು: ‘ಲೋಕಸಭೆ ಚುನಾವಣೆಯ ಮತದಾರರ ಪಟ್ಟಿ ಅಂತಿಮಗೊಂಡಿದ್ದು, ಒಟ್ಟು 5.10 ಕೋಟಿ ಜನ ಮತದಾನಕ್ಕೆ ಅರ್ಹರಾಗಿದ್ದಾರೆ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.

2014ರ ಲೋಕಸಭೆ ಚುನಾವಣೆಯಲ್ಲಿ 4.62 ಕೋಟಿ ಮತದಾರರಿದ್ದರು ಎಂದು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಅವರು ತಿಳಿಸಿದರು.

ಈ ಬಾರಿ 2.58 ಕೋಟಿ ಪುರುಷ, 2.52 ಕೋಟಿ ಮಹಿಳಾ, 4,661 ಮಂದಿ ತೃತೀಯ ಲಿಂಗಿಗಳು ಇದ್ದಾರೆ. ಇವರಲ್ಲಿ 10 ಲಕ್ಷ ಹೊಸ ಮತದಾರರು (18–19 ವರ್ಷ ವಯಸ್ಸಿನವರು) ನೋಂದಾಯಿಸಿಕೊಂಡಿದ್ದಾರೆ. 30ರಿಂದ 39 ವರ್ಷ ವಯಸ್ಸಿನವರು ಅತೀ ಹೆಚ್ಚು, 1.33 ಕೋಟಿ ಮತದಾರರಿದ್ದಾರೆ ಎಂದು ವಿವರಿಸಿದರು.

58,186 ಮತಗಟ್ಟೆ: 28 ಕ್ಷೇತ್ರಗಳಿಗೆ ಒಟ್ಟು 58,186 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮೊದಲ ಹಂತದ ಚುನಾವಣೆ ನಡೆಯುವ 14  ಕ್ಷೇತ್ರಗಳಲ್ಲಿ 30,164 ಮತ್ತು ಎರಡನೇ ಹಂತದ ಚುನಾವಣೆಗೆ 28,022 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಮಹಿಳೆಯರೇ ನಿರ್ವಹಿಸುವ 639 ಸಖಿ ಮತಗಟ್ಟೆ, ಅಂಗವಿಕಲರೇ ನಿರ್ವಹಿಸುವ 96 ಮತಗಟ್ಟೆ, ಬುಡಕಟ್ಟು ಸಂಸ್ಕೃತಿ ಬಿಂಬಿಸುವ 39 ಎಥ್ನಿಕ್ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ ಎಂದರು.

ಶತಾಯುಷಿಗಳು 5,580 ಮಂದಿ
ಮತದಾರರ ಪಟ್ಟಿಯಲ್ಲಿ 100 ವರ್ಷ ದಾಟಿದ 5,580 ಮಂದಿ ಇದ್ದಾರೆ. 90ರಿಂದ 99 ವರ್ಷ ವಯಸ್ಸಿನ 1,47,213 ಮಂದಿ ಇದ್ದರೆ, 80–90 ವರ್ಷ ವಯಸ್ಸಿನ 7,87,893 ಮಂದಿ ಇದ್ದಾರೆ ಎಂದು ಸಂಜೀವ್‌ಕುಮಾರ್ ವಿವರಿಸಿದರು.

237 ಮಂದಿ ಕಣದಲ್ಲಿ
ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುವ 14 ಜಿಲ್ಲೆಗಳಲ್ಲಿ ಒಟ್ಟು 237 ಅಭ್ಯರ್ಥಿಗಳು ‌ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ಬೆಳಗಾವಿ ಕ್ಷೇತ್ರದಲ್ಲಿ ಅತೀ ಹೆಚ್ಚು 57 ಅಭ್ಯರ್ಥಿಗಳಿದ್ದಾರೆ. ಅತೀ ಕಡಿಮೆ 5 ಅಭ್ಯರ್ಥಿಗಳು ರಾಯಚೂರಿನಲ್ಲಿ ಇದ್ದಾರೆ.

ನಾಮಪತ್ರ ಸಲ್ಲಿಸಿದ್ದ 311 ಜನರಲ್ಲಿ 29 ಮಂದಿಯ ನಾಮಪತ್ರ ತಿರಸ್ಕೃತಗೊಂಡಿವೆ. 45 ಮಂದಿ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !