ಹುಡುಗಿ ಪ್ರೀತಿಸುವ ವಿಚಾರಕ್ಕೆ ಗಲಾಟೆ: ಸ್ನೇಹಿತನ ಕೊಲೆ

7

ಹುಡುಗಿ ಪ್ರೀತಿಸುವ ವಿಚಾರಕ್ಕೆ ಗಲಾಟೆ: ಸ್ನೇಹಿತನ ಕೊಲೆ

Published:
Updated:
Deccan Herald

ಬೆಂಗಳೂರು: ಹುಡುಗಿಯನ್ನು ಪ್ರೀತಿಸುವ ವಿಚಾರವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಬ್ಬರ ನಡುವೆ ಶುರುವಾದ ಜಗಳವು ಒಬ್ಬಾತನ ಕೊಲೆಯೊಂದಿಗೆ ಅಂತ್ಯವಾಗಿದೆ.

ವಿ.ವಿ.ಪುರದ ಬಸಪ್ಪ ವೃತ್ತದಲ್ಲಿರುವ ತ್ರಿಶೂಲ್ ವಸತಿಗೃಹದಲ್ಲಿ ರೋನಕ್ ಚೌಧರಿ ಎಂಬುವರನ್ನು ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಲಾಗಿದೆ. ಆತನ ಸ್ನೇಹಿತ ರಾಯಲ್‌ ಚೌಧರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಅಹಮದಾಬಾದ್‌ನ ರೋನಕ್, ನರ್ಸಿಂಗ್ ಪರೀಕ್ಷೆ ಬರೆಯಲೆಂದು 130 ಸಹಪಾಠಿಗಳ ಜೊತೆ ಬೆಂಗಳೂರಿಗೆ ಬಂದಿದ್ದರು. ರಾಯಲ್ ಹಾಗೂ ಮತ್ತೊಬ್ಬ ಸ್ನೇಹಿತ ಅಪೂರ್ವ ಚೌಧರಿ ಜೊತೆ ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆಗಸ್ಟ್‌ 2ರಿಂದ ಆರಂಭಗೊಂಡಿದ್ದ ಪರೀಕ್ಷೆಗಳು ಬುಧವಾರ ಮುಕ್ತಾಯಗೊಂಡಿದ್ದವು. ಹೀಗಾಗಿ, ಎಲ್ಲರೂ ಒಟ್ಟಿಗೆ ಕುಳಿತು ರಾತ್ರಿ ಹರಟೆ ಹೊಡೆಯುತ್ತಿದ್ದರು. ವಸತಿಗೃಹದ ಇನ್ನೊಂದು ಕೊಠಡಿಯಲ್ಲಿ ಉಳಿದುಕೊಂಡಿದ್ದ ನರ್ಸಿಂಗ್‌ ವಿದ್ಯಾರ್ಥಿನಿಯನ್ನು ಪ್ರೀತಿಸುವ ವಿಚಾರವಾಗಿ ರೋನಕ್ ಹಾಗೂ ರಾಯಲ್ ನಡುವೆ ಜಗಳ ಶುರುವಾಗಿತ್ತು. ಅದರಿಂದ ನೊಂದ ರೋನಕ್, ಬೇರೊಂದು ಕೊಠಡಿಗೆ ಹೋಗಲು ಮುಂದಾಗಿದ್ದ. ಆತನನ್ನು ಹಿಂಬಾಲಿಸಿದ್ದ ರಾಯಲ್, ತಳ್ಳಿ ಕೆಳಗೆ ಬೀಳಿಸಿದ್ದ’ ಎಂದರು.

‘ಜಗಳ ಆಗಿದ್ದು ನಿಜ. ಆದರೆ, ಕೊಲೆ ಮಾಡುವ ಉದ್ದೇಶವಿರಲಿಲ್ಲ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !