ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಸಿಲಿಂಡರ್‌ ಕೊರತೆ ಇಲ್ಲ

ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ: ಪೂರೈಕೆದಾರರ ಅಭಯ
Last Updated 28 ಮಾರ್ಚ್ 2020, 4:03 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಾದ್ಯಂತ ಎಲ್‌ಪಿಜಿ ಅಡುಗೆ ಅನಿಲ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಳ ಸಾಕಷ್ಟು ದಾಸ್ತಾನಿದ್ದು, ಸಾರ್ವಜನಿಕರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರಿ ತೈಲ ಕಂಪನಿಗಳು ಅಭಯ ನೀಡಿವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್‌ ಆಯಿಲ್, ಬಿಪಿಸಿ ಮತ್ತು ಎಚ್‌ಪಿಸಿಗಳು ಅಡುಗೆ ಅನಿಲ ಸಿಲಿಂಡರ್‌ಗಳ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಂಡಿವೆ. ಯಾವುದೇ ತುರ್ತು ಸಂದರ್ಭದಲ್ಲಿಯೂ, ಈ ಸಿಲಿಂಡರ್‌ಗಳ ಪೂರೈಕೆಗೆ ತೊಂದರೆಯಾಗುವುದಿಲ್ಲ ಎಂದು ಅವರು ಖಾತ್ರಿ ನೀಡಿವೆ.

ರಾಜ್ಯ ಸರ್ಕಾರ ಕೂಡ ಎಲ್‌ಪಿಜಿ ಮರುಪೂರಣ ಮಾಡಿ ವಿತರಣೆ ಮಾಡುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿದೆ. ಇದನ್ನು ಅವಶ್ಯಕ ವಸ್ತು ಎಂದು ಪರಿಗಣಿಸಲಾಗಿದೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.

‘ಎಲ್ಲರೂ ಏಕಕಾಲಕ್ಕೆ ಮುಂಗಡ ಕಾಯ್ದಿರಿಸಿದರೆ ಕಷ್ಟವಾಗುತ್ತದೆ. ಪರಿಸ್ಥಿತಿ ಹೀಗಾದಲ್ಲಿ, ಯಾರಿಗೆ ತೀರಾ ಅಗತ್ಯವಿರುತ್ತದೆಯೋ ಅವರಿಗೆ ಸಿಗದಿರಬಹುದು. ಹಾಗಾಗಿ, ಗ್ರಾಹಕರು ಆತಂಕಕ್ಕೀಡಾಗಿ ಅಗತ್ಯವಿಲ್ಲದೆ, ಯಾರೂ ಮುಂಗಡವಾಗಿ ಕಾಯ್ದಿರಿಸಬಾರದು’ ಎಂದು ಕಂಪನಿಗಳು ಮನವಿ ಮಾಡಿವೆ.

‘ಎಲ್‌ಪಿಜಿ ಸಿಲಿಂಡರ್‌ ಪೂರೈಸಲಾಗುತ್ತಿದೆ. ಮೊದಲು ನಾಲ್ಕೈದು ದಿನಗಳಾಗುತ್ತಿದ್ದವು. ಈಗ ಬುಕ್‌ ಮಾಡಿದ ಮರುದಿನವೇ ಸಿಲಿಂಡರ್‌ ನೀಡಿದರು’ ಎಂದು ಆರ್.ಟಿ. ನಗರದ ಯಶೋದಾ ಎಂಬುವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT