ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ ಕೇಂದ್ರದ ಮ್ಯಾನೇಜರ್‌ಗೆ ಬೆದರಿಕೆ ಹಾಕಿದ ಸಚಿವ

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಲಖನೌ: ತಮ್ಮ ಬೆಂಬಲಿಗರ ವಾಹನಗಳಿಗೆ ಶುಲ್ಕ ವಿಧಿಸಲು ಮುಂದಾದ ಟೋಲ್‌ ಕೇಂದ್ರದ ಮ್ಯಾನೇಜರ್‌ಗೆ ಉತ್ತರ ಪ್ರದೇಶದ ಸಚಿವ ಹಾಗೂ ಬಿಜೆಪಿ ಮುಖಂಡ ಸೂರ್ಯ ಪ್ರತಾಪ್‌ ಶಾಹಿ ಅವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

‘ಖುಷಿನಗರ ಜಿಲ್ಲೆಯ ಹೆದ್ದಾರಿ 28ರಲ್ಲಿ ಸಚಿವರು ಬೆಂಬಲಿಗರೊಂದಿಗೆ ತೆರಳುತ್ತಿದ್ದಾಗ, ಟೋಲ್‌ ಕೇಂದ್ರವೊಂದರ ಸಿಬ್ಬಂದಿ, ಅವರ ಬೆಂಬಲಿಗರ ವಾಹನಗಳಿಗೆ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಕೆರಳಿದ ಸಚಿವರು ಮ್ಯಾನೇಜರ್‌ರನ್ನು ಕರೆದು ವಾಹನಗಳಿಗೆ ತೆರಳಲು ಅನುವು ಮಾಡಿಕೊಡುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಒಪ್ಪದ ಸಿಬ್ಬಂದಿ ಹಾಗೂ ಮ್ಯಾನೇಜರ್‌ಗೆ ಸಚಿವರ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

‘ಟೋಲ್‌ ಶುಲ್ಕ ಪಾವತಿಸದ ವಾಹನಗಳನ್ನು ಬಿಡಲು ನನಗೆ ಅಧಿಕಾರವಿಲ್ಲ ಎಂದು ನಾನು ಸಚಿವರಿಗೆ ತಿಳಿಸಿದ್ದೆ. ಆದರೂ ಅವರು ವಾಹನ ಬಿಡುವಂತೆ ಒತ್ತಾಯಿಸಿದ್ದಾರೆ’ ಎಂದು ಮ್ಯಾನೇಜರ್‌ ವಿವೇಕ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT